ಮಡಿಕೇರಿ, ಜ. ೧೩: ದೈವಾರಾಧಕರು ಹಾಗೂ ದೈವ ನರ್ತಕರನ್ನು ಒಗ್ಗೂಡಿಸಿ ಆರಾಧನೆಯ ಮೂಲ ಸ್ವರೂಪ, ಕಟ್ಟುಪಾಡನ್ನು ಉಳಿಸುವದರೊಂದಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲು ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಜಿಲ್ಲೆಯ ದೈವಾರಾಧಕರು

ಮತ್ತು ದೈವ ನರ್ತಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ೬೦ಕ್ಕೂ ಹೆಚ್ಚು ದೈವÀ ಸ್ಥಾನಗಳಿವೆ. ರಾಜ್ಯದಲ್ಲಿ ದೈವಾರಾಧಕರಿಗೆ ಅವಮಾನವಾಗುವಂತ ಘಟನೆಗಳು ನಡೆದಿವೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ದೈವಕ್ರಮ ಬದಲಾಗುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು, ಬೇರೆ ಧರ್ಮದವರು ಕೋಲವನ್ನು ವ್ಯಂಗ್ಯ ಮಾಡಿ ನೃತ್ಯ ಮಾಡಿ ದೈವವನ್ನು ಅಪಹಾಸ್ಯ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೊಡಗು ಜಿಲ್ಲೆಯಲ್ಲಿ ದೈವಾರಾಧಕರು ಹಾಗೂ ದೈವನರ್ತಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರೆಲ್ಲ ಒಂದಾಗಬೇಕಾಗಿದೆ. ಅದಕ್ಕಾಗಿ ಸಂಘ ರಚಿಸಿ ಮುನ್ನಡೆಯಬೇಕಾಗಿದೆ. ಆರಾಧನೆಯೂ ಬದಲಾಗುತ್ತಿದೆ ಈ ಬಗ್ಗೆ ಜಾಗೃತಗೊಳ್ಳಬೇಕು. ತುಳುನಾಡಿಗೂ, ಕೊಡಗಿಗೂ ಅವಿನಾಭಾವ ಸಂಬAಧವಿದೆ. ನ್ಯಾಯ ನೀಡುವ

(ಮೊದಲ ಪುಟದಿಂದ) ಕಾರ್ಣಿಕನನ್ನು ನಂಬುವ ವರ್ಗ ದೊಡ್ಡದಿದೆ. ದೇವರು ಸುಮ್ಮನಿದ್ದರೂ ದೈವ ಸುಮ್ಮನಿರಲ್ಲ ಎನ್ನುವ ಮಾತಿದೆ. ಈ ನಿಟ್ಟಿನಲ್ಲಿ ದೈವದ ಮೂಲ ಕ್ರಮವನ್ನು ಉಳಿಸಿ ಬೆಳಸುವಂತಾಗಬೇಕು ಎಂದರು.

ಸಭೆಯಲ್ಲಿ ತುಳುನಾಡಿನ ದೈವದ ಬಗ್ಗೆ ಅಪಮಾನ ಮಾಡಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಕಾರ್ಯಕ್ರಮಗಳಲ್ಲಿ ದೈವದ ವೇಷಭೂಷಣ ಧರಿಸುವುದು ನಿರ್ಬಂಧಿಸಬೇಕು, ಜಿಲ್ಲೆಯಲ್ಲಿರುವ ದೈವಸ್ಥಾನದ ಹೆಸರು, ಊರು, ದೈವ ಆರಾಧಕರ ಪರಿಚಯದ ದಾಖಲೀಕರಣ, ಮಾಸಾಶನಕ್ಕೆ ಅರ್ಹರಿರುವ ಪಟ್ಟಿ ತಯಾರಿಸುವುದು, ದೈವಸ್ಥಾನದ ಅಭಿವೃದ್ಧಿಗೆ ಸರಕಾರದ ಗಮನ ಸೆಳೆಯುವುದು, ದೈವ ಸೇವೆ, ನೇಮೋತ್ಸವವನ್ನು ಕ್ರಮಬದ್ಧವಾಗಿ ನಡೆಸುವುದಕ್ಕೆ ಮಾರ್ಗದರ್ಶನ ನೀಡುವುದು, ಆರಾಧಕರ, ನರ್ತಕರ ಸಂಕಷ್ಟಕ್ಕೆ ಸ್ಪಂದಿಸುವುದು, ವರ್ಷಕ್ಕೊಮ್ಮೆ ಆರಾಧಕರ ಕುಟುಂಬದ ಎಲ್ಲಾ ಸದಸ್ಯರಿಗೆ ಜಾನಪದ ವಿದ್ವಾಂಸರಿAದ ಧಾರ್ಮಿಕ ಉಪನ್ಯಾಸ ನೀಡುವುದು, ದೈವ ಆರಾಧಕರ ಹಾಗೂ ನರ್ತಕರ ಸಂಘ ರಚಿಸುವ ನಿರ್ಧಾರಕ್ಕೆ ಸರ್ವರು ಒಪ್ಪಿಗೆ ನೀಡಿ ಅನುಮೋದಿಸಿದರು.

ದೈವಾರಾಧÀಕ ದೇವಪ್ಪ ಕೊಯನಾಡು ಮಾತನಾಡಿ, ಕೊಡಗು ಹಾಗೂ ತುಳುನಾಡಿನ ಆರಾಧಾನೆ ಯಲ್ಲಿ ಕೆಲವು ಬದಲಾವಣೆಗಳಿವೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಮೂಲ ಆರಾಧನೆ ನಡೆಯಬೇಕು. ಈ ನಿಟ್ಟಿನಲ್ಲಿ ಆರಾಧಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ದೈವನರ್ತನ ಮಾಡುವ ಒಂದೊAದು ವರ್ಗಕ್ಕೆ ಅವುಗಳದ್ದೇ ಆದ ಕಟ್ಟುಪಾಡುಗಳಿವೆ. ಮೂಲ ದೈವ ಹೊರತುಪಡಿಸಿ ಬೇರೆ ದೇವರ ಕೋಲ ಕಟ್ಟುತ್ತಿರುವ ಕ್ರಮ ಸರಿಯಲ್ಲ ಈ ಬಗ್ಗೆಯೂ ಚರ್ಚೆಗಳು ನಡೆಯಬೇಕಾಗಿದೆ ಎಂದರು.

ದೈವಾರಾಧಕ ಸಂತೋಷ್ ಮಾತನಾಡಿ, ಕೊಡಗಿನಲ್ಲಿ ನಡೆಯುವ ಕೋಲದಲ್ಲಿ ಕೊಡಗಿನ ನರ್ತಕರು ಹಾಗೂ ಆರಾಧಕರೇ ಭಾಗವಹಿಸು ವಂತಾಗಬೇಕು. ಇದರಿಂದ ಕ್ರಮ ಜೀವಂತವಾಗಿರುತ್ತದೆ ಎಂದು ಸಲಹೆ ನೀಡಿದರು.

ಈ ಹಿನ್ನೆಲೆ ಸಂಘ ರಚನೆ ಅನಿವಾರ್ಯ ಎಂದು ಪ್ರತಿಪಾದಿಸಿದರು.

ಸಭೆಯಲ್ಲಿ ಆರಾಧನೆ ಕುರಿತು ಚರ್ಚೆಗಳು ನಡೆದವು. ಒಂದೊAದು ಕ್ಷೇತ್ರದಲ್ಲಿ ಆರಾಧನೆಯಲ್ಲಿ ಕೆಲವೊಂದು ಭಿನ್ನತೆಗಳಿರುತ್ತದೆ. ತಲತಲಾಂತ ರಗಳಿಂದ ನಡೆದುಕೊಂಡು ಬಂದAತೆ ಧಾರ್ಮಿಕ ಕಾರ್ಯ ನಡೆಯಬೇಕು. ಆರಾಧನೆ ವಿಷಯದಲ್ಲಿ ಸಂಘ ಮಧ್ಯಪ್ರವೇಶಿಸಬಾರದು. ನಮ್ಮ ಸಮಸ್ಯೆ, ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಎಂಬ ಸಲಹೆಗಳು ವ್ಯಕ್ತವಾದವು. ಸಂಘ ಸ್ಥಾಪನೆ ಮುನ್ನ ಮತ್ತೊಮ್ಮೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಅದನ್ನು ಬೈಲಾದಲ್ಲಿ ಅಳವಡಿಸಿ ಪೂರಕ ರೂಪುರೇಷೆ ಅಳವಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲೆಯ ವಿವಿಧೆಡೆಗಳಿಂದ ದೈವದ ಆರಾಧಕರು, ನರ್ತಕರು ಪಾಲ್ಗೊಂಡಿದ್ದರು.