ಮಡಿಕೇರಿ, ಜ. ೧೨: ಮಡಿಕೇರಿಯ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ, ನಾಗದೇವರ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ತಾ. ೧೪ ಮತ್ತು ೧೫ ರಂದು ನಡೆಯಲಿದೆ.
ಆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪೊಳಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗಲಿದೆ. ತಾ. ೧೪ ರಂದು ಸಂಜೆ ೬ ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆÆÃಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ದಿಶಾಬಲಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ತಾ. ೧೫ ರಂದು ಬೆಳಿಗ್ಗೆ ೮ ರಿಂದ ಪುಣ್ಯಾಹ, ಗಣಪತಿ ಹೋಮ, ಚಂಟಿಕಾ ಹೋಮ, ನವಕಲಶ ಪೂಜೆ, ಪ್ರಧಾನ ಹೋಮ, ನಾಗದೇವರಿಗೆ ತಂಬಿಲ ಪೂಜೆ, ಆಶ್ಲೇಷ ಬಲಿ ಕಲಶಾಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಪ್ರಸಾದ ವಿನಿಯೋಗ, ಅನ್ನಪ್ರಸಾದ. ಸಂಜೆ ೫.೩೦ ರಿಂದ ಸಾಯಂಪೂಜೆ, ೬.೩೦ಕ್ಕೆ ರಂಗಪೂಜೆ, ಸಂಜೆ ೭ ರಿಂದ ಬಲಿ ಉತ್ಸವ ರಾಜಾಂಗಣ ಪ್ರಸಾದ, ಪೀಠಪೂಜೆ, ಶುದ್ಧಿಕಲಶಾಭಿಷೇಕ, ಮಂತ್ರಾಕ್ಷತೆ, ಅನ್ನಪ್ರಸಾದ ಏರ್ಪಡಿಸಲಾಗಿದೆ.