ಕೂಡಿಗೆ, ಜ. ೧೩: ಇಲ್ಲಿಗೆ ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ. ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಮೊದಲು ಚರ್ಚೆಗಳನ್ನು ನಡೆಸಿ ಅದರನ್ವಯ ೧೫ ಹಣಕಾಸು ಯೋಜನೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆದವು, ಈಗಾಗಲೇ ಕೈಗೊಂಡಿರುವ ಕ್ರಿಯಾ ಯೋಜನೆಯ ಅನುಮೋದನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ವಿಷಯಗಳ ಪ್ರಸ್ತಾವನೆ ನಡೆಸಿ, ಗ್ರಾಮದ ಅಭಿವೃದ್ಧಿಗೆ ಸಂಬAಧಿಸಿದAತೆ ವಿವಿಧ ಯೋಜನೆಗಳ ತಯಾರಿಸುವ ಚರ್ಚೆಗಳು ನಡೆದವು, ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡ್ನ ಅಭಿವೃದ್ಧಿಯ ಯೋಜನೆಗಳಿಗೆ ಸಂಬAಧಿಸಿದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಸರಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿ £Ãಡಿದರು. ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮಾಹಿತಿ ನೀಡಿದರು. ಈ ಸಂದರ್ಭ ಉಪಾಧ್ಯಕ್ಷ ಬಿ.ಆರ್. ಪ್ರವೀಣ್, ಸದಸ್ಯರಾದ ಎ.ಜಿ. ಅಜಿತ್ ಕುಮಾರ್, ಸಿ.ಸಿ. ವಿನಯ್, ಹೆಚ್.ಆರ್ ಪ್ರಕಾಶ್, ಎಂ.ಎಸ್. ಕವಿತಾ, ಎಂ.ಡಿ. ಜಲಜಾಕ್ಷಿ, ಎನ್.ಜಿ. ರಾಮ್‌ದೇವ್, ಸುನಿತ, ಹೆಚ್.ಕೆ. ವಿನೋದ್ ಕುಮಾರ್, ಸುಮಿ, ಟಿ.ಪಿ. ಅಶ್ವಿನಿ, ಸೇರಿದಂತೆ ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ ಹಾಜರಿದ್ದರು.