ಮುಳ್ಳೂರು, ಜ. ೧೨: ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ತಳ ಮಟ್ಟದಿಂದ ಮೇಲ್ಮಟ್ಟದ ವರೆಗೂ ಎಲ್ಲರಿಗೂ ಅಧಿಕಾರದ ಅವಕಾಶ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಯೋಜನೆ ಮತ್ತು ಪಂಚತAತ್ರ ವ್ಯವಸ್ಥೆಯ ರೂವಾರಿಯಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದರು.
ಅವರು ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಆಯೋಜಿಸಿದ ಸೋಮವಾರಪೇಟೆ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ವಲಯ ಮಟ್ಟದ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ಥಳೀಯ ಮಟ್ಟದಲ್ಲಿ ಒಗ್ಗಟ್ಟಾಗಿ ಸಂಘಟಿತರಾಗಬೇಕೆAಬ ಉದ್ದೇಶ ದಿಂದ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದವರಿಗೆ ಸಮಾನತೆಯ ಹಕ್ಕು ಕೊಟ್ಟಿರುವ ಪಕ್ಷವಾಗಿದೆ ಎಂದರು.
ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್ ಮಾತನಾಡಿ, ಸ್ಥಳೀಯ ಮಟ್ಟದ ಕಾಂಗ್ರೆಸಿನ ಪ್ರಮು ಖರು, ಹಿರಿಯರನ್ನು ಗುರುತಿಸುವ ಮೂಲಕ ಸಂಘಟನೆಯನ್ನು ಬಲ ಪಡಿಸಬೇಕು ಎಂದು ಹೇಳಿದರು.
ಮಡಿಕೇರಿ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಮಂಥರ್ ಗೌಡ ಮಾತನಾಡಿ, ಬಿ.ಜೆ.ಪಿ. ಸರಕಾರದಲ್ಲಿ ವಿಫಲತೆಯೆ ಹೆಚ್ಚಾಗಿದ್ದು ಚುನಾವಣೆಯಲ್ಲಿ ಸೋಲುವ ಭಯ ಇರುವುದರಿಂದ ೨ ವರ್ಷ ಕಳೆದರೂ ತಾ.ಪಂ. ಮತ್ತು ಜಿ.ಪಂ.ಚುನಾವಣೆ ನಡೆಸಲು ಬಿಜೆಪಿ ಸರಕಾರಕ್ಕೆ ಸಾಧ್ಯವಾಗಲಿಲ್ಲ ಎಂದರು.
ಮತ್ತೋರ್ವ ಆಕಾಂಕ್ಷಿ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ೩ ದಶಕಗಳಿಂದ ಶಾಸಕರಾಗಿದ್ದರೂ ಅಭಿವೃದ್ಧಿ ಶೂನ್ಯ ವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಂಘಟನೆಯ ಬಲವರ್ಧನೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ವಿವಿಧ ಸಮಿತಿ ಪ್ರಮುಖರಾದ ಯಾಕೂಬ್, ವಕೀಲ ಜಯೇಂದ್ರ, ವಿ.ಪಿ.ಶಶಿಧರ್, ರಂಗಸ್ವಾಮಿ ಮಾತನಾಡಿದರು. ಸಮಾರಂಭದಲ್ಲಿ ಸೋಮವಾರಪೇಟೆ ಬ್ಲಾಕ್ ನೂತನ ಅಧ್ಯಕ್ಷ ಶಿವಾನಂದ್, ಕಾಂಗ್ರೆಸ್ ಪ್ರಮುಖರಾದ ವೇಧಕುಮಾರ್, ಪಾವನ, ರಾಜಮ್ಮ ರುದ್ರಯ್ಯ, ಗೋವಿಂದರಾಜ್ ದಾಸ್, ಎಸ್.ಕೆ. ವೀರಪ್ಪ, ಜಿ.ಎಂ. ಕಾಂತರಾಜ್, ಎಸ್.ಸಿ. ಶರತ್ ಶೇಖರ್ ಹಾಗೂ ಇತರರು ಹಾಜರಿದ್ದರು.