ಮಡಿಕೇರಿ, ಜ. ೧೧: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವಾಲಯದ ಆವರಣಕ್ಕೆ ಆರು ಲಕ್ಷದ ಹತ್ತು ಸಾವಿರ ರೂಗಳ ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಸಿದ ದಾನಿಗಳಾದ ತೆನ್ನಿರ ತಿಮ್ಮಯ್ಯ ಹಾಗೂ ಅವರ ಪತ್ನಿ ಚೋಂದಕ್ಕಿ ಅವರನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಸನ್ಮಾನಿಸಿದರು.
ಕಾರ್ಯಕ್ರಮದ ಕುರಿತು ದೇವಾಲಯ ಸಮಿತಿ ನಿರ್ದೇಶಕ ಚೆರುಮಾಡಂಡ ಸತೀಶ್ ಸೋಮಣ್ಣ ಮಾತನಾಡಿ, ತೆನ್ನಿರ ತಿಮ್ಮಯ್ಯ ದಂಪತಿ ದೇವಸ್ಥಾನಕ್ಕೆ ನೀಡಿದ ಈ ಕೊಡುಗೆ ಅತ್ಯಂತ ಅವಶ್ಯಕ ಹಾಗೂ ಬಹುವೆಚ್ಚದಾಗಿದ್ದು ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಸದಾ ಅವರಿಗೆ ಅಭಾರಿಯಾಗಿರುತ್ತದೆ ಎಂದು ತಿಳಿಸಿದರು. ಕುಟುಂಬದ ಸದಸ್ಯರ ಪರವಾಗಿ ಮಾತನಾಡಿದ ತೆನ್ನಿರ ಮೈನ ಅವರು ಪ್ರತಿಯೊಬ್ಬ ಮನುಷ್ಯ ದುಡಿಮೆಯಿಂದ ಹಣ ಸಂಪಾದಿಸುತ್ತಾರೆ. ಸಂಪಾದನೆಯ ಗಳಿಕೆಯಲ್ಲಿ ಅನೇಕರು ಹಣವನ್ನು ಉಳಿಸುತ್ತಾರೆ. ಗಳಿಕೆಯ ಉಳಿಕೆ ಹಣವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಗುಣದಿಂದ ದೇವರ ಕಾರ್ಯಕ್ಕೆ ನೀಡುವುದು ಅಥವಾ ವಿನಿಯೋಗಿಸುವುದು ಸಮರ್ಪಣೆ ಎಂದು ಗುರುತಿಸಲ್ಪಡುತ್ತದೆ ಎಂದರು. ದೇವಾಲಯ ಸಮಿತಿ ಅಧ್ಯಕ್ಷ ಪೂಜಾರಿರ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಪುತ್ತೇರಿರ ಸೋಮಯ್ಯ, ಪದಾಧಿಕಾರಿಗಳಾದ ಮುಂಜಾAದಿರ ವಾಸು ನಾಣಯ್ಯ , ತೆನ್ನಿರ ಮಿಟ್ಟು ಪೆಮ್ಮಯ್ಯ, ತಳೂರು ಸೋಮಣ್ಣ, ಚಾತುರನ ಅಶೋಕ್, ತೆೆನ್ನಿರ ರಮೇಶ್, ಚೊಟ್ಟೆರ ದೇವಕ್ಕಿ, ಹಂಚೆಟ್ಟಿರ ಸುಮಿತ, ತೆನ್ನಿರ ಮಾಚಮ್ಮ, ಬಿಜ್ಜಂಡ ಬೋಜಕ್ಕಿ, ತೆನ್ನಿರ ಕಸ್ತೂರಿ, ಮುಕ್ಕಾಟಿರ ಶಾಂತಿ, ಮೂಟೇರ ಮುದ್ದಪ,್ಪ ಮುಂಜಾAದಿರ ಸತ್ಯ ಬೋಪಯ್ಯ, ಕೋಳುಮಾಡಂಡ ಕಿರಣ್, ಜಬ್ಬಂಡ ಅಶ್ವಿನಿ, ಕೋಳುಮಾಡನ ಸೂರಿ, ತೆನ್ನಿರ ಜಯ, ಮನು ಪ್ರತಾಪ್, ದಿಲ್ಲನ್ ಅಪ್ಪಚ್ಚ, ಬಬಿತ, ಪ್ರಿನ್ಸ್ ಪೂಣಚ್ಚ, ಶಾನ್ ಪೊನ್ನಪ್ಪ, ಕಾರ್ಯಪ್ಪ, ಗಂಗಮ್ಮ, ಜಮುನಾ, ಚಂಗಪ್ಪ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.