ಮಡಿಕೇರಿ, ಜ. ೧೧: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ತಾ. ೧೪ ರಂದು ೩೩ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವ ನಡೆಯಲಿದೆ.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಸುಧೀರ್, ಪ್ರಧಾನ ಕಾರ್ಯದರ್ಶಿ ವಿನೋದ್ ವಿ.ಎಸ್. ಈ ಬಗ್ಗೆ ಮಾಹಿತಿಯಿತ್ತರು. ತಾ. ೧೩ ರ ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆಗಳು ನಡೆಯಲಿವೆ. ತಾ. ೧೪ ರಂದು ಬೆಳಿಗ್ಗೆ ೬.೩೦ ಗಂಟೆಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ೭ ಗಂಟೆಗೆ ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ, ೭.೩೦ ಗಂಟೆಯಿAದ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆ, ೮.೩೦ ಗಂಟೆಗೆ ಕುಟ್ಟಿಚಾತನ್ ದೇವರ ವೆಳ್ಳಾಟಂ, ೯ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ೧೦ ಗಂಟೆಗೆ ಗುಳಿಗದೇವರ ವೆಳ್ಳಾಟಂ, ೧೦.೩೦ ಗಂಟೆಗೆ ಅಯ್ಯಪ್ಪ ದೇವರ ಅಲಂಕಾರ ಪೂಜೆ, ೧೧ ಗಂಟೆಗೆ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣಿ, ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೬ ಗಂಟೆಯಿAದ ಭಜನೆ, ೭ ಗಂಟೆಯಿAದ ಅಲಂಕಾರ ಪೂಜೆ, ಪಡಿಪೂಜೆ, ರಾತ್ರಿ ೮ ಗಂಟೆಗೆ ದೀಪಾರಾಧನೆ, ಪ್ರಸಾದ ವಿತರಣೆ ನೆರವೇರಲಿದೆ ಎಂದು ಅವರುಗಳು ತಿಳಿಸಿದರು.

ಗೋಷ್ಠಿಯಲ್ಲಿ ದೇವಾಲಯದ ಗೌರವಾಧ್ಯಕ್ಷರಾದ ಡಾ. ಎಂ.ಜಿ. ಪಾಟ್ಕರ್, ಉತ್ಸವ ಸಮಿತಿ ಅಧ್ಯಕ್ಷ ಎಸ್. ಸುರೇಶ್, ಸದಸ್ಯರಾದ ಪೂವಪ್ಪ, ತಿಮ್ಮಯ್ಯ ಉಪಸ್ಥಿತರಿದ್ದರು.