ಚೆಟ್ಟಳ್ಳಿ, ಜ. ೧೧: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ನೂರ್ಕೊಲ್ ನಾಡ್ ಒತ್ತೋರ್ಮೆ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಿತು.

ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೋಮಾಲೆ ಪೊಮ್ಮಕ್ಕಡ ಕೂಟದ ಉಮ್ಮತಾಟ್ ಹಾಗೂ ನೃತ್ಯ, ಪುರುಷರಿಂದ ಬೊಳಕಾಟ್, ಪರೆಯಕಳಿ ಪ್ರದರ್ಶನ, ಕೊಡವ ಹಾಡು, ವಿವಿಧ ಮನೋರಂಜನಾ ಕ್ರೀಡೆಯೊಂದಿಗೆ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಕೊಡವ ಆಟ್ ಪಾಟ್ ತರಬೇತಿ ನೀಡಲಾಯಿತು. ವಿಶೇಷವಾಗಿ ಎಲೆ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು.

ಮಧ್ಯಾಹ್ನದ ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷರಾದ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ ನೂತನವಾಗಿ ಪ್ರಾರಂಭ ಗೊಂಡ ಚೆಟ್ಟಳ್ಳಿ ಕೊಡವ ಸಮಾಜ ಎಲ್ಲರ ಸಹಕಾರದಿಂದ ಇಂದು ಉತ್ತಮ ಕಾಂiÀiðವನ್ನು ಮಾಡಲು ಸಹಕಾರಿಯಾಗಿದೆ. ಸಮಾಜಕ್ಕೊಂದು ಸ್ವಂತ ಕಟ್ಟಡ ಇದ್ದಾಗ ಮಾತ್ರ ಶಾಶ್ವತ ನೆಲೆಯಾಗಲಿದೆಂದರು.

ಸಮಾಜದ ನಿರ್ದೇಶಕ ಬಿದ್ದಂಡ ಮಾದಯ್ಯ, ಐಚೆಟ್ಟಿರ ಚೋಂದಮ್ಮ ವೇದಿಕೆಯಲ್ಲಿದ್ದರು. ಮುಳ್ಳಂಡ ಮಾಯಮ್ಮ ತಮ್ಮಯ್ಯ ಪ್ರಾರ್ಥಿಸಿ, ಮುಳ್ಳಂಡ ರತ್ತು ಚಂಗಪ್ಪ ಸ್ವಾಗತಿಸಿ, ಉಪಾಧ್ಯಕ್ಷೆ ಐಚೆಟ್ಟಿರ ಸುನಿತ ಮಾಚಯ್ಯ ವಂದಿಸಿ, ಕಾರ್ಯದರ್ಶಿ ಪುತ್ತರಿರ ಕರುಣ್‌ಕಾಳಯ್ಯ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭ ಚಂಗಪ್ಪ, ನಿರ್ದೇಶಕರಾದ ಐಚೆಟ್ಟಿರ ಮಾಚಯ್ಯ, ಪುತ್ತರಿರ ಗಂಗು ಅಚ್ಚಯ್ಯ, ಬಟ್ಟೀರ ರಕ್ಷÄ ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಕಡೇಮಡ ವಿನ್ಸಿ ಅಪ್ಪಯ್ಯ, ಕೇಚೆಟ್ಟೀರ ರತಿ ಕಾರ್ಯಪ್ಪ, ಪಳಂಗAಡ ಕಾಳಪ್ಪ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.