ಮಡಿಕೇರಿ, ಜ. ೧೧: ಕೊಡಗಿನ ಮಣ್ಣು ಪೋಷಕಾಂಶಗಳಿAದ ಕೂಡಿದ ‘ಚಿನ್ನ’ವೇ ಆಗಿದ್ದು, ಈ ಮಣ್ಣಿನ ಆರೋಗ್ಯ ಸಂರಕ್ಷÀಣೆೆಯ ಮೂಲಕ ಜಿಲ್ಲೆಯ ಬೆಳೆಗಾರರು ಉತ್ತಮ ಕೃಷಿ ನಡೆಸಲು ಸಾದ್ಯವಿದೆಯೆಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಉಪ ನಿರ್ದೇಶಕ ಚಂದ್ರಪ್ಪ ಅಭಿಪ್ರಾಯಿಸಿದರು.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಪ್ರಮುಖರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಜಿಲ್ಲೆÉಯ ಮಣ್ಣು ಉತ್ತಮವಾಗಿದ್ದರೂ, ನಿರಂತರವಾದ ಮಳೆÉ ಮೊದಲಾದ ಕಾರಣಗಳಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಅಸಮತೋಲಿತವಾಗಿರುತ್ತದೆ. ಈ ಹಿನ್ನೆಲೆ ಬೆಳೆಗಾರರು ತಮ್ಮ ತೋಟದ ಮಣ್ಣಿನ ಪರೀಕ್ಷೆಯ ಮೂಲಕ, ಕೇಂದ್ರ ನೀಡುವ ಸಲಹೆ ಸೂಚನೆಗಳನ್ನು ಆಧರಿಸಿ ಅಗತ್ಯ ಪೋಷಕಾಂಶಗಳನ್ನು ಮಣ್ಣಿಗೆ ಒದಗಿಸುವುದು ಅತ್ಯವಶ್ಯವಾಗಿದೆಯೆಂದು ತಿಳಿಸುತ್ತಲೆ, ಯಾವುದೇ ಪರೀಕ್ಷೆಗಳಿಲ್ಲದೆ ಅನಗತ್ಯವಾಗಿ ಮಣ್ಣಿಗೆ ಹೆಚ್ಚಿನ ರಸಗೊಬ್ಬರಗಳನ್ನು ನೀಡುವ ಮೂಲಕ ಮಣ್ಣು ಸತ್ತ÷್ವವನ್ನು ಕಳೆದುಕೊಂಡು ಮಲಿನಗೊಳ್ಳದಂತೆ ಎಚ್ಚರ ವಹಿಸಬೇಕೆಂದು ಕರೆ ನೀಡಿದರು.
ಬೆಳೆÉಗಾರರು ತಮ್ಮ ತೋಟದ ಮಣ್ಣನ್ನು ಕನಿಷ್ಟ ೩ ವರ್ಷಗಳಿಗೊಮ್ಮೆ ಪರೀಕ್ಷಿಸಿಕೊಂಡು, ಮಣ್ಣಿನ ಆಮ್ಲೀಯತೆಯ ಮಟ್ಟವನ್ನು ಸರಿಪಡಿಸಿಕೊಳ್ಳುವುದರೊಂದಿಗೆ, ಪೋಷಕಾಂಶಗಳ ಕೊರತೆಗೆ ತಕ್ಕಂತೆ ಅವುಗಳನ್ನು ಮಣ್ಣಿಗೆ ಒದಗಿಸಲು ಕ್ರಮ ಕೈಗೊಳ್ಳುವುದು ಅವಶ್ಯ. ಕಾಫಿ ತೋಟಗಳಲ್ಲಿ ಮಣ್ಣಿನ ಆಮ್ಲೀಯತೆಯ ಮಟ್ಟ ೬ ರಿಂದ ೬.೫ ರ ಒಳಗೆ ಇರುವುದು ಉತ್ತಮ. ಆಮ್ಲೀಯತೆಯ ಮಟ್ಟವನ್ನು ನಿಯಂತ್ರಿಸಲು ತೋಟಗಳಿಗೆ ಸುಣ್ಣ ಹಾಕುವುದು ಅತ್ಯವಶ್ಯವೆಂದು ತಿಳಿಸಿದರು.
ಕೇಂದ್ರ ಜಿಲ್ಲೆಯ ಎಲ್ಲಾ ಬೆಳೆಗಾರರಿಗೂ ಮುಕ್ತವಾಗಿದೆ- ಚೆಟ್ಟಳ್ಳಿಯ ಸಂಶೋಧನಾ ಕೇಂದ್ರ ಜಿಲ್ಲೆಯ ಎಲ್ಲಾ ಸಣ್ಣ ಮತ್ತು ದೊಡ್ಡ ಬೆಳೆಗಾರರಿಗೆ, ಅವರ ಕೃಷಿ ಸಮಸ್ಯೆಗಳನ್ನು ಆಲಿಸಲು ಯಾವತ್ತೂ ಮುಕ್ತವಾಗಿರುತ್ತದೆ. ಸಂಶೋಧನಾ ಕೇಂದ್ರದ ಸಂಶೋಧನೆಗಳ ಉಪಯೋಗವನ್ನು ಬೆಳೆÉಗಾರರು ಪಡೆದುಕೊಳ್ಳಲು ಮುಂದೆ ಬರುವಂತೆ ಮನವಿ ಮಾಡಿದರು.
ಕೀಟಕ್ಕೆ ನಿಯಂತ್ರಣ ಮದ್ದು: ಕೇಂದ್ರ್ರದ ಕೀಟ ಶಾಸ್ತç ವಿಭಾಗದ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ ಮಾತನಾಡಿ, ಕಾಫಿ ತೋಟಗಳನ್ನು ನಿರಂತರವಾಗಿ ಬಾಧಿಸುವ ಸ್ಟೆಂ ಬೋರರ್ ಸೇರಿದಂತೆ ಇತÀರ ಯಾವುದೇ ಕೀಟ ಬಾಧೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದೇ ಹೊರತು, ಅದನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಅಸಾಧ್ಯ. ಹತ್ತಿ ಕೃಷಿಯಲ್ಲಿ ಕಂಡು ಬಂದ ಕೀಟ ಬಾಧೆ ನಿಯಂತ್ರಣಕ್ಕೆ ಬೀಟಿ ಹತ್ತಿ ತಳಿ ಅಭಿವೃದ್ಧಿಪಡಿಸಲಾಯಿತು. ಆದರೆ, ರೂಪಾಂತರಿ ಕೀಟಗಳ ಬಾಧೆ ಇದರಲ್ಲೂ ಅತ್ಯಧಿಕವಾಗಿ ಕಂಡು ಬರುತ್ತಿರುವುದನ್ನು ಅವರು ಉದಾಹರಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಫಿ ಗಿಡಗಳ ಎಳೆಯ ರೆಂಬೆಗಳಿಗೆ ತಗಲುವ ಕೀಟ ಬಾಧೆ ‘ಶಾರ್ಟ್ ಹೋಲ್ ಬೋರರ್’ ನಿಯಂತ್ರಣಕ್ಕೆ ಕೇಂದ್ರ ‘ಜೈಕೋಂ ಟ್ರಾಪ್’ ಎನ್ನುವ ಕೀಟಗಳನ್ನು ಹಿಡಿದು ಕೀಟ ಬಾಧೆಯನ್ನು ಹೋಗಲಾಡಿಸುವ ವಿಧಾನವನ್ನು ಆವಿಷ್ಕರಿಸಿದೆ. ಈ ಜೈಕೋಂ ಟ್ರಾಪ್ನ್ನು ಪ್ರತಿ ಎಕರೆ ಕಾಫಿ ತೋಟದಲ್ಲಿ ೧೨ ಸಂಖ್ಯೆಯಲ್ಲಿ ಅಳವಡಿಸಿದಲ್ಲಿ ಕೀಟ ಬಾಧೆಯನ್ನು ನಿಯಂತ್ರಿಸಬಹುದಾಗಿದೆ. ೨೫ ಜೈಕೋಂ ಟ್ರಾಪ್ಗಳನ್ನು ಬೆಳೆಗಾರರಿಗೆ ೭೫೦ ರೂ. ದರದಲ್ಲಿ ಒದಗಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.
ಕಾಫಿ ಗಿಡಗಳಲ್ಲಿ ಹೆಚ್ಚಾಗಿ ಕಂಡು ಬರುವ ಸ್ಟೆಂ ಬೋರರ್ ನಿಯಂತ್ರಣಕ್ಕೆ ಹುಳಗಳನ್ನು ಹಿಡಿಯುವ ‘ಟ್ರಾಪ್’ಗಳನ್ನು, ಕಾಯಿ ಕೊರಕ ಕೀಟಗಳ ನಿಯಂತ್ರಣಕ್ಕೆ ‘ಬೋರಾ ಟ್ರಾಪ್’ನ್ನು ನೂತನವಾಗಿ ಕಂಡು ಹಿಡಿಯಲಾಗಿದೆ. ಇದನ್ನು ಪ್ರತಿ ಎಕರೆಗೆ ೧೫ ರಂತೆ ಕಟ್ಟಬೇಕಾಗುತ್ತದೆ. ಈ ಬೋರಾ ಟ್ರಾಪ್ ೨೫ ಕ್ಕೆ ೬೦೦ ರೂ.ಗಳಂತೆ ಲಭ್ಯವಿದೆಯೆಂದು ಮಾಹಿತಿಯನ್ನಿತ್ತು, ಈ ಟ್ರಾಪ್ಗಳಲ್ಲಿ ಬಳಸುವ ರಾಸಾಯನಿಕ ಪ್ರತಿ ಲೀಟರ್ಗೆ ೧೫೦ ರೂ.ಗಳಂತೆ ಒದಗಿಸಲಾಗುತ್ತಿದೆ. ಈ ಸೌಲಭ್ಯಗಳ ಮೂಲಕ ಕಾಫಿ ತೋಟಗಳ ಕೀಟಬಾಧೆ ನಿಯಂತ್ರಣಕ್ಕೆ ಬೆಳೆಗಾರರು ಮುಂದಾಗಬೇಕೆAದು ತಿಳಿಸಿದರು.
ಸ್ಟೆಂ ಬೋರರ್ ಗಿಡಕ್ಕೆ ವಿಶೇಷ ಉಪಚಾರ: ಯಾವುದೇ ತೋಟದಲ್ಲಿ ಕಂಡು ಬರುವ ಸ್ಟೆಂ ಬೋರರ್ ಪೀಡಿತ ಗಿಡಕ್ಕೆ ‘ಬಟ್ಟೆಯನ್ನು ಸುತ್ತಿ’ ಕೀಟ ನಾಶಕ ಸಿಂಪಡಿಸಿ, ಕೀಟ ಬಾಧೆಯಿಂದ ಅದನ್ನು ಮುಕ್ತಗೊಳಿಸುವ ವಿಧಾನವನ್ನು ಕಂಡು ಹಿಡಿಯಲಾಗಿದೆ. ಕೇಂದ್ರ ಈಗಾಗಲೇ ಕೆಲ ತೋಟಗಳಲ್ಲಿ ಈ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿರುವ ಮಾಹಿತಿಯನ್ನು ಅವರು ನೀಡಿದರು.
ಒಳ್ಳೆಯ ಮಣ್ಣಿನಿಂದ ರೋಗಬಾಧೆಗೆ ಮುಕ್ತಿ: ಕೇಂದ್ರÀ್ರದ ಮಣ್ಣು ವಿಜ್ಞಾನಿ ರಾಜೀಬ್ ಪಾಟಿ ಮಾತನಾಡಿ, ಮಣ್ಣು ಪೋಷಕಾಂಶಗಳಿAದ ಕೂಡಿ ಆರೋಗ್ಯಯುತವಾಗಿದ್ದಲ್ಲಿ, ಅಲ್ಲಿರುವ ಕೃಷಿ ರೋಗ ಬಾಧೆಯಿಂದ ಬಹುತೇಕ ಮುಕ್ತವಾಗಿರುತ್ತದೆ. ಕೊಡಗಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲೂ ಮಳೆ ಇರುವುದರಿಂದ ಹೆಚ್ಚಾಗಿ ಮಣ್ಣಿನ ಆಮ್ಲೀಯತೆಯ ಮಟ್ಟ(ಪಿಹೆಚ್ ವ್ಯಾಲ್ಯು) ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಮಣ್ಣಿನ ಪರೀಕ್ಷೆಯ ಮೂಲಕ, ಒಂದು ತೋಟಕ್ಕೆ ಎಷ್ಟು ರಸ ಗೊಬ್ಬರವನ್ನು ಹಾಕಬೇಕೆನ್ನುವುದನ್ನು ಖಚಿತವಾಗಿ ನಿರ್ಧರಿಸಿ, ಕೇಂದ್ರ ನೀಡುವ ಸಲಹೆಯಂತೆ ರಸಗೊಬ್ಬರವನ್ನು ನೀಡುವುದು ಅವಶ್ಯವೆಂದು ಸ್ಪಷ್ಟಪಡಿಸಿದರು.
ರೋಗ ನಿರೋಧಕ ಗಿಡದ ಸಂಶೋಧನೆ: ಸಸ್ಯ ತಳಿ ಶಾಸ್ತçದ ವಿಜ್ಞಾನಿ ಡಾ. ಮಂಜುನಾಥ್, ಕಾಫಿ ಗಿಡಗಳನ್ನು ಬಾಧಿಸುವ ಬಿಳಿಕಾಂಡ ಕೊರಕ ಕೀಟಗಳನ್ನು ನಿಯಂತ್ರಿಸುವ ಹೊಸ ಕಾಫಿ ತಳಿಯ ಸಂಶೋಧನೆಯನ್ನು ಕೇಂದ್ರÀ್ರ ನಡೆಸುತ್ತಿದೆಯಲ್ಲದೆ, ಜಿಲ್ಲೆಯ ವಿವಿಧ ೩೦ ಕಾಫಿ ತೋಟಗಳಲ್ಲಿನ ಅಧಿಕ ಇಳುವರಿ ನೀಡುವ ೨೦೫ ಗಿಡಗಳ ಪರಿಶೀಲನಾ ಕಾರ್ಯವನ್ನು ನಡೆಸುತ್ತಿರುವುದಾಗಿ ಮಾಹಿತಿಯನ್ನಿತ್ತರು.
ಕೇಂದ್ರÀದಿAದ ಆಸಕ್ತ ಬೆಳೆÉಗಾರರಿಗೆ ಪ್ರಸ್ತುತ ಅರೇಬಿಕಾ ಚಂದ್ರಗಿರಿ ತಳಿಯನ್ನು ಮತ್ತು ರೋಬಸ್ಟಾದಲ್ಲಿ ಕಾಂಜೆನ್ಸಿ ರೋಬಸ್ಟಾ ತಳಿಯ ಬೀಜಗಳನ್ನು ಪ್ರತಿ ಕೆ.ಜಿ.ಗೆ ೪೦೦ ರೂ.ಗಳಂತೆ ಒದಗಿಸುತ್ತಿದೆಯೆಂದು ಹೇಳಿದರು.
ಕಂಬ ಚಿಗುರಿನಿಂದ ಗಿಡ: ಕಾಫಿ ತೋಟಗಳಲ್ಲಿ ಅಧಿಕ ಫಸಲು ನೀಡುವ ಗಿಡಗಳ ಕಂಬ ಚಿಗುರುಗಳಿಂದ ಗಿಡಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತಿದೆ. ಕಂಬ ಚಿಗುರಿನಿಂದ ಉತ್ಪಾದಿಸುವ ಗಿಡ, ಮೂಲ ಗಿಡದಂತೆಯೇ ಅಧಿಕ ಇಳುವರಿ ನೀಡುವ ಗಿಡವಾಗಿರುತ್ತದೆಂದು ಮಾಹಿತಿ ನೀಡಿ, ಕಂಬ ಚಿಗುರಿನಿಂದ ಗಿಡಗಳನ್ನು ಮಾಡುವ ವಿಧಾನವನ್ನು ಆಸಕ್ತ ಬೆಳೆಗಾರರಿಗೆ ತಿಳಿಸಿಕೊಡಲು ಕೇಂದ್ರ್ರ ಸದಾ ಸಿದ್ಧವಿದೆಯೆಂದು ಸಷ್ಟಪಡಿಸಿದರು.
ಮಣ್ಣು ವಿಜ್ಞಾನಿ ಪ್ರಫುಲ್ಲ ಮಾತನಾಡಿ, ಕೇಂದ್ರವು ಬೆಳೆಗಾರರು ನೀಡುವ ಮಣ್ಣನ್ನು (ಸ್ಯಾಂಪಲ್)ನಿಗದಿತ ದರದೊಂದಿಗೆ ಪರಿಶೀಲಿಸಿ, ಆಯಾ ತೋಟಕ್ಕೆ ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಕಳೆÉದ ಸಾಲಿನಲ್ಲಿ ಕೇಂದ್ರ್ರ ೨೧೦೦ ಮಣ್ಣು ಪರೀಕ್ಷೆಗಳನ್ನು ನಡೆಸಿದ್ದು, ಇದರ ಸದುಪಯೋಗವನ್ನು ೮೦೦ ಬೆಳೆಗಾರರು ಪಡೆದುಕೊಂಡಿದ್ದಾರೆAದು ಮಾಹಿತಿ ನೀಡಿದರು. ವಿಜ್ಞಾನಿಗಳ ಕೊರತೆ- ಕೇಂದ್ರದಲ್ಲಿ ಅಗ್ರಾನಮಿ, ಪೆಥಾಲಜಿ , ಫಿಸಿಯಾಲಜಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರ್ರದ ಉಪ ನಿರ್ದೇಶಕ ಚಂದ್ರಪ್ಪ ಅವರು ತಿಳಿಸಿ, ಪ್ರಸ್ತುತ ಕೇಂದ್ರ್ರದಲ್ಲಿ ಐವರು ವಿಜ್ಞಾನಿಗಳು ಸೇರಿದಂತೆ ೨೦ ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ್ರ ೧೨೦.೮೬ ಹೆಕ್ಟೇರ್ ಜಾಗವನ್ನು ಹೊಂದಿದ್ದು, ಅದರಲ್ಲಿ ೧೦೮.೩೬ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ತೋಟದಲ್ಲಿ ಒಟ್ಟು ೬೯ ಮಂದಿ ಕಾರ್ಯನಿರ್ವಹಿಸುತ್ತಿರುವದಾಗಿ ಮಾಹಿತಿಯನ್ನಿತ್ತರು.
ತಾಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ ಅತಿ ಹೆಚ್ಚು ಕಾಫಿ ಕೃಷಿ ನಡೆಸುವ ಕೊಡಗಿನಲ್ಲಿ, ಆಧುನೀಕತೆಯ ಜೊತೆಯಲ್ಲಿ ಬೆಳೆಗಾರರು ಕೃಷಿ ಕಾರ್ಯಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಂವಾದ ಆಯೋಜಿಸಲಾಗಿದೆ ಎಂದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಪ್ರಾಕೃತಿಕ ವಿಕೋಪ. ಕೋವಿಡ್ನಿಂದ ಜಿಲ್ಲೆಯ ಬೆಳೆಗಾರ ಕಾಫಿ ತೋಟಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಇದರೊಂದಿಗೆ ಬರ್ರಿ ಬೋರರ್ನಂತಹ ಕೀಟ ಬಾಧೆ ಕೃಷಿಗೆ ತೊಡಕನ್ನುಂಟು ಮಾಡುತ್ತಿದೆ. ಈ ಹಿನ್ನೆಲೆ ಕಾಫಿ ಸಂಶೋಧನಾ ಉಪ ಕೇಂದ್ರ್ರ ಬೆಳೆಗಾರರಿಗೆ ಕೃಷಿಗೆ ಪೂರಕವಾದ ಮಾಹಿತಿಗಳನ್ನು, ಕೀಟಬಾಧೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಹೇಳಿದರು.
ಸುಂಟಿಕೊಪ್ಪ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆAಟ್ ಸ್ವಾಗತಿಸಿ, ವಂದಿಸಿದರು. ಜಿಲ್ಲೆಯ ವಿವಿಧೆಡೆಗಳ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.