ಮಡಿಕೇರಿ, ಜ. ೧೧: ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಐಂಡ್ ರಿಸರ್ಚ್ನಲ್ಲಿ ಎಂಎಸ್‌ಸಿ ಬಯೋಕೆಮಿಸ್ಟಿçಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಿಲ್ಲೆಯ ಪಿ.ಎಸ್. ಶಿಶಿರ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾಳೆ. ಈಕೆ ಭಾಗಮಂಡಲ ನಾಡು, ಕೋಪಟ್ಟಿ ಗ್ರಾಮದ ಪೊಡನೋಳನ ನಳಿನಿ ಮತ್ತು ಶಿವಾಜಿ ದಂಪತಿ ಪುತ್ರಿ.