ಕೂಡಿಗೆ, ಜ. ೧೧: ಕಳೆದ ವಾರ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳ ಸಭಾತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಮಾಸಿಕ ಸಭೆಯನ್ನು ರದ್ದುಗೊಳಿಸಿ ತಾ.೧೧ಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ಸಭೆಗೆ ಅಧ್ಯಕ್ಷೆ ಸೇರಿದಂತೆ ೧೦ ಜನ ಸದಸ್ಯರು ಗೈರು ಹಾಜರಾದ ಕಾರಣದಿಂದಾಗಿ ಸಭೆಯನ್ನು ಹಾಜರಾತಿ ಕೊರತೆಯಿಂದಾಗಿ ಮುಂದೂಡಲಾಯಿತು. ಇದು ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ರತ್ನಮ್ಮ, ಹೆಚ್.ಎಸ್. ರವಿ, ಕೆ.ಟಿ. ಗಿರೀಶ್, ಎಂ.ಎಸ್. ಜಯಶೀಲ ಹಾಜರಿದ್ದರು. ಅಧ್ಯಕ್ಷೆ ಮಂಗಳಾ, ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ಶಿವಕುಮಾರ್, ವಾಣಿ, ಜಯಶ್ರೀ, ಲಕ್ಮೀ, ಚಂದ್ರು ಪಲ್ಲವಿ, ಸದಸ್ಯರು ಗೈರಾಗಿದ್ದಾರೆ.