ಪೊನ್ನಂಪೇಟೆ, ಜ. ೧೧: ಜನವರಿ ೧೫ ರಿಂದ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ನಲ್ಲಿ ನಡೆಯಲಿರುವ ೧೬ ನೇ ರಾಷ್ಟಿçÃಯ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಕೇಳಪಂಡ ವೈ. ನಾಣಯ್ಯ, ಕಡೆಮಾಡ ಎ. ಕಾವೇರಪ್ಪ, ಮುಕ್ಕಾಟಿರ ಎನ್. ಕುಶಾಲಪ್ಪ, ಕುಪ್ಪಂಡ ಪಿ. ಜಗತ್ ಬೆಳ್ಳಿಯಪ್ಪ ಮತ್ತು ಕುಟ್ಟಂಡ ಎ. ಕವನ್, ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಪ್ಪ ಮತ್ತು ಕೊಡಗು ಜಿಲ್ಲಾ ಫ್ಲೋರ್ ಬಾಲ್ ಅಧ್ಯಕ್ಷ ಹಾಗೂ ಕರ್ನಾಟಕ ಫ್ಲೋರ್ ಬಾಲ್ ಸೆಲೆಕ್ಷನ್ ಕಮಿಟಿ ಚೇರ್ಮನ್ ಮಿನ್ನಂಡ ಜೋಯಪ್ಪ ತಿಳಿಸಿದ್ದಾರೆ.