ಮಡಿಕೇರಿ, ಜ. ೧೧: ದಂತ ರಕ್ಷಣೆ ಎಲ್ಲರಿಗೂ ಅವಶ್ಯವಾಗಿದ್ದು, ದಂತ ಶುಭ್ರತೆಗೆ ಎಲ್ಲರೂ ಆದ್ಯತೆ ಕೊಡಬೇಕು ಎಂದು ದಂತ ತಜ್ಞೆ ಡಾ|| ಅನುಶ್ರೀ ಹೇಳಿದರು.

ಕೊಡಗು ವಿದ್ಯಾಲಯ- ಅಪೊರ್ಚ್ಯುನಿಟಿ ಶಾಲೆಯಲ್ಲಿ ಸುಮಾರು ೬೦ ವಿದ್ಯಾರ್ಥಿಗಳ ದಂತ ಪರೀಕ್ಷೆ ನಡೆಸಿ, ಮಾತನಾಡಿದ ಡಾ|| ಅನುಶ್ರೀ, ವಿದ್ಯಾರ್ಥಿಗಳ ದಂತ ಗುಣಮಟ್ಟ ತಕ್ಕಮಟ್ಟಿಗೆ ಉತ್ತಮವಾಗಿ ರುವುದಾಗಿ ಹರ್ಷ ವ್ಯಕ್ತಪಡಿಸಿದರು.

ಫ್ಲೋರೈಡ್ ಅಂಶವು ಮಕ್ಕಳ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು, ಕೊಡಗಿನ ಜಲಮೂಲದಲ್ಲಿ ಫ್ಲೋರೈಡ್ ಅಂಶ ಸಮಾಧಾನಕರವಾಗಿ ಇದೆ ಎಂದರು. ಫ್ಲೋರೈಡ್ ಶುಶ್ರೂಷೆ ಮಕ್ಕಳಿಂದ ಮಕ್ಕಳಿಗೆ ಬದಲಾಗುತ್ತದೆ, ವೈದ್ಯರ ಪರಿಶೀಲನೆ ಬಳಿಕ ಶುಶ್ರೂಷೆ ಸೂಕ್ತ ಎಂದು ಹ್ಯಾಪಿ ಟೀತ್ ದಂತ ಕೇಂದ್ರದ ಸ್ಥಾಪಕಿಯೂ ಆಗಿರುವ ತಜ್ಞೆ ಡಾ|| ಅನುಶ್ರೀ ಹೇಳಿದರು.

ಅಪೊರ್ಚ್ಯುನಿಟಿ ಶಾಲೆಯ ಪ್ರಾಂಶುಪಾಲೆ ಗೀತಾ ಶ್ರೀಧರ್, ವ್ಯವಸ್ಥಾಪಕ ಟ್ರಸ್ಟಿ ವೀಣಾ ಚೆಂಗಪ್ಪ, ವಿದ್ಯಾಲಯ ವ್ಯವಸ್ಥಾಪಕ ರವಿ, ಅಶ್ವಿನಿ ಆಸ್ಪತ್ರೆಯ ಸಂಚಾಲಕ ರವೀಂದ್ರ ಹಾಗೂ ಇತರರು ಹಾಜರಿದ್ದರು.

ಎ.ಬಿ. ಶೆಟ್ಟಿ ಸ್ಮರಣಾರ್ಥ ದಂತ ವಿಜ್ಞಾನ ಸಂಸ್ಥೆ ಹಾಗೂ ಅಶ್ವಿನಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಶಿಬಿರ ಏರ್ಪಡಿಸಲಾಗಿತ್ತು.