ಮಡಿಕೇರಿ, ಜ. ೧೦: ಮಡಿಕೇರಿಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ೨೮ನೇ ವಾರ್ಷಿಕೋತ್ಸವವು ಇತ್ತೀಚೆಗೆ ಶ್ರೀ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಜರುಗಿತು. ಸತ್ಯ ನಾರಾಯಣ ಪೂಜೆ ಹಾಗೂ ಭೋಜನ ವ್ಯವಸ್ಥೆಯನ್ನು ಅದಿತಿ ಪ್ರಕಾಶ್ ವಹಿಸಿಕೊಂಡಿದ್ದರು ಪೂಜೆಯ ನಂತರ ಹೆಣ್ಣು ಮಕ್ಕಳಿಗೆ ಗೌರವ ಪೂರ್ವಕವಾಗಿ ಮಡಿಲಕ್ಕಿ ಕಾರ್ಯಕ್ರಮ ಹಾಗೂ ಭೋಜನ ನಡೆಯಿತು.
ಸಂಜೆ ಸಭಾ ಕಾರ್ಯಕ್ರಮ ನಿರ್ದೇಶಕರು ದೇವಾಂಗ ಮಹಿಳಾ ಸಮಾಜ ನಿರ್ದೇಶಕಿ ವಿದ್ಯಾ ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಸಂಘದ ಅಧ್ಯಕ್ಷೆ ಹೆಚ್. ಪಾರ್ವತಿ ಉದ್ಘಾಟನೆ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ವತ್ಸಲ ಜಗನ್ನಾಥ್ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ದೇವಾಂಗ ಮಹಿಳಾ ಸಂಘ, ದೊಡ್ಡ ಬಳ್ಳಾಪುರ), ಚೂಡಾಮಣಿ ಕೇಶವಮೂರ್ತಿ (ಪ್ರಧಾನ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಹಿಳಾ ಸಂಘ, ಬೆಂಗಳೂರು ಕೆ.ಎನ್. ಗಜಾನನ (ಅಧ್ಯಕ್ಷರು, ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘ, ಮಡಿಕೇರಿ) ಇವರುಗಳು ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಸೇವಾರ್ಥದಾರರಾದ ಅದಿತಿ ಪ್ರಕಾಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಧನಲಕ್ಷಿö್ಮ ಅÀವರು ‘ಧ್ಯಾನ ಮಾಡಿ, ಅಧ್ಯಾತ್ಮಿಕತೆಯತ್ತ ಸಾಗಿ ಅಂತಶಕ್ತಿ ಹೆಚ್ಚಿಸಿಕೊಳ್ಳಿ’ ಎಂಬ ಸಂದೇಶವನ್ನು ನೀಡಿದರು. ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಎಂ.ಬಿ.ಎ, ಎಂ.ಎಸ್, ಎಂ.ಡಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಾಣಿಜ್ಯಶಾಸ್ತç ವಿಷಯಕ್ಕೆ ಸಂಬAಧಿಸಿದAತೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಡಾಕ್ಟರ್ ಎಂ.ಎನ್. ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಾಂಗ ಮಹಿಳಾ ಸಾಹಿತಿಗಳಾದ ಶೋಭಾ ರಕ್ಷಿತ್, ಲತಾ ಜೈ ಶಂಕರ್, ಪುಷ್ಪ ಮನೋಹರ್, ಗೀತಾಂಜಲಿ ಅರುಣ್ ಅವರನ್ನು ಸಮಾಜದ ವತಿಯಿಂದ ಗೌರವಿಸಲಾಯಿತು. ಈ ಮಹಿಳಾ ಸಾಹಿತಿಗಳು ತಮ್ಮ ಒಂದೊAದು ಕವನವನ್ನು ವಾಚಿಸಿದರು.
ಸಭಾ ಕಾರ್ಯಕ್ರಮದ ನಂತರ ಮಕ್ಕಳು ಮತ್ತು ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿತು. ಮಕ್ಕಳು, ಮಹಿಳೆಯರಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಪ್ರಮುಖ ಆಕರ್ಷಣೆ ನವ ದುರ್ಗೆಯರ ವೈಭವ ನೃತ್ಯವು ಎಲ್ಲರ ಮೈ ನವಿರೇಳಿಸಿತು. ಮಕ್ಕಳಿಗೆ ‘ಚಿಗುರು' ಮಡಿಲಕ್ಕಿ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಹೆಣ್ಣು ಮಕ್ಕಳಿಗೆ ‘ತವರೂರ ಸಿರಿ', ಸ್ಥಳೀಯ ಮಹಿಳೆಯರಿಗೆ ‘ಅದೃಷ್ಟವಂತ ಮಹಿಳೆ' ಹಾಗೂ ಬಹುಮಾನವನ್ನು ಲಾಟರಿ ಮೂಲಕ ಆರಿಸಿ ನೀಡಲಾಯಿತು. ಈ ಕಾರ್ಯವನ್ನು ಭಾಗ್ಯ ಪ್ರಕಾಶ್, ನಂದಿನಿ ಗಣೇಶ್, ಜಯಶ್ರೀ ನಾಗೇಶ್ ಗವಿ ಹಾಗೂ ವಿದ್ಯಾ ದೇವರಾಜ್ ನಿರೂಪಿಸಿದರು. ಇಂದಿರಾ ಜಯರಾಮ್, ಲಕ್ಷಿö್ಮ ಮೋಹನ್ ಪ್ರಾರ್ಥಿಸಿ, ಪದ್ಮಾ ಮೋಹನ್ ಸ್ವಾಗತಿಸಿದರು. ಅಧ್ಯಕ್ಷೆ ಭಾರತಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಲ ದಿವಾಕರ್ ವಂದಿಸಿದರು.
ಸರೋಜರಾಜು, ಮನೋನ್ಮಣಿ, ಭಾರತಿ ಸುಬ್ರಹ್ಮಣ್ಯ, ಭಾರತಿ ಮಂಜುನಾಥ್, ಪೂರ್ಣಿಮಾ ಜಗದೀಶ್, ಮನೋನ್ಮಣಿ ಬಾಲರಾಜ್ ಉಪಸ್ಥತರಿದ್ದರು.