ನಾಪೋಕ್ಲು, ಜ. ೯: ಶ್ರದ್ಧಾ ಕೇಂದ್ರ ಗಳು ಸುಸ್ಥಿತಿಯಲ್ಲಿದ್ದರೆ ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿ ಯಾಗಲು ಸಾಧ್ಯ ಎಂದು ಶ್ರೀ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ನಿವೃತ್ತ ಮುಖ್ಯ ಶಿಕ್ಷಕ ಕುಲ್ಲೇಟಿರ ಗುರುವಪ್ಪ ಹೇಳಿದರು. ಅವರು ಇಲ್ಲಿಗೆ ಸಮೀಪದ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭಗವತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ವಾರ್ಷಿಕ ಮಹಾಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ದೇವಾಲಯಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತರು ತಮ್ಮ ಕೈಲಾದ ಸಹಕಾರವನ್ನು ನೀಡುವುದರ ಮೂಲಕ ದೇವರನ್ನು ಸ್ಮರಿಸುವಂತಾಗಬೇಕೆAದರು. ದೇವಾಲಯದ ಅಭಿವೃದ್ಧಿಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೆಲವೊಂದು ನಿರ್ಧಾರಗಳನ್ನು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಈ ಸಂದರ್ಭ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಪೂಜೆ ಹಾಗೂ ಬ್ರಹ್ಮರಾಕ್ಷಸಕ್ಕೆ ಹಾಲು ಪಾಯಸ ವಿಶೇಷ ಪೂಜಾ ವಿಧಿ ವಿಧಾನ ನಡೆಯಿತು. ಮಹಾಸಭೆಯಲ್ಲಿ ಉಪಾಧ್ಯಕ್ಷ ಬೊಪ್ಪಂಡ ಕುಶಾಲಪ್ಪ, ತಕ್ಕರಾದ ನಾಟೋಳಂಡ ಸಚಿನ್, ತಿರೋಡಿರ ಲಕ್ಷö್ಮಣ, ಕೇಲೇಟ್ಟಿರ ಮುತ್ತಪ್ಪ, ಕುಲ್ಲೇಟಿರ ಶಂಕರಿ ಹಾಗೂ ಸಮಿತಿ ಸದಸ್ಯರು, ಊರಿನ ಮಾಜಿ, ಹಾಲಿ ಜನಪ್ರತಿನಿಧಿಗಳು, ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಭಿವೃದ್ಧಿ ಸಮಿತಿಯ ಗೌರವ ಕಾರ್ಯದರ್ಶಿ ಕಂಗAಡ ಜಾಲಿ ಪೂವಪ್ಪ ಸ್ವಾಗತಿಸಿ, ಕೇಲೇಟಿರ ಬೆಲ್ಲು ನಾಣಯ್ಯ ಪ್ರಾರ್ಥಿಸಿದರು. ಶಿವಚಾಳಿಯಂಡ ಜಗದೀಶ್ ಆಡಳಿತ ಮಂಡಳಿ ವರದಿಯನ್ನು, ಅರೆಯಡ ಪ್ರಕಾಶ್ ಕಳೆದ ಮಹಾಸಭೆ ವರದಿಯನ್ನು ಹಾಗೂ ಅಜ್ಜೇಟಿರ ಮುತ್ತಪ್ಪ ಲೆಕ್ಕಪತ್ರ ವರದಿಯನ್ನು ಸಭೆಯ ಮುಂದಿಟ್ಟರು ಶಿವಚಾಳಿಯಂಡ ಸಹದೇವ ವಂದಿಸಿದರು.