ಮಡಿಕೇರಿ, ಜ. ೧೦: ಪಾಲೂರು ಗ್ರಾಮದ ವಾರ್ಷಿಕ ಊರೋರ್ಮೆ ಸಮಾರಂಭ ಸಂಭ್ರಮದಿAದ ಜರುಗಿತು. 'ಪಾಲೂರ್ ಕೊಡವಾಮೆ ಕೂಟ' ಏರ್ಪಡಿಸಿದ್ದ ೧೭ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಕೊಡವ ಕುಟುಂಬದ ನೂರಾರು ಸದಸ್ಯರು ಭಾಗಿಯಾಗಿದ್ದರು. ಮೇಪಾಡಂಡ ವೇಣು ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ಹಿರಿಯ ಕಾಫಿ ಬೆಳೆಗಾರ ಬೊಳ್ಳಿಯಂಡ ಎಂ. ಪಳಂಗಪ್ಪ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ. ಕೊಡವರ ಆಚಾರ ವಿಚಾರಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಕೊಡವಾಮೆ ಕೂಟದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕಿರುಚಿತ್ರ, ಸಾಕ್ಷö್ಯಚಿತ್ರ ನಿರ್ದೇಶಕ ಮಂದನೆರವAಡ ಯುಗ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಗ್ರಾಮಸ್ಥರಿಗೆ ಹಲವು ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮುಖ್ಯ ಆಕರ್ಷಣೆಯಾಗಿದ್ದು ‘ಕೊಡವ ವಾಲಗಾಟ್' ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡಿ ಒಬ್ಬರಿಗೊಬ್ಬರು ಸವಾಲು ಹಾಕುತ್ತಾ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು.

ಸಮಾರಂಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮಂದನೆರವAಡ ಸಂಜು, ಉಪಾಧ್ಯಕ್ಷ ಪೊದುವಾಡ ಜಯ ಪೊನ್ನಪ್ಪ, ಉಪಾಧ್ಯಕ್ಷೆ ನೆರವಂಡ ಚೆಸ್ಲಿ ದೇವಯ್ಯ, ಸದಸ್ಯರಾದ ಪೈಕೇರ ನಂದ, ಚೆರುವಾಳಂಡ ದಿವಿಜ, ನೆರವಂಡ ಸಭಿ, ಮಂದನೆರವAಡ ಲೋಕೇಶ್, ಮೇಪಾಡಂಡ ವಿಜು, ನೆರವಂಡ ಶ್ವೇತಾ ಉಪಸ್ಥಿತರಿದ್ದರು.