ಕೂಡಿಗೆ, ಜ. ೯: ತೊರೆನೂರು ಗ್ರಾಮದ ಮುಖ್ಯ ರಸ್ತೆ ಸಮೀಪದಲ್ಲಿರುವ ಹಾರಂಗಿ ನೀರಾವರಿ ಇಲಾಖೆಯ ಸತ್ಯ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಬೀರುವಿನಲ್ಲಿದ್ದ ನಗದನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸತ್ಯ ಅವರು ತೊರೆನೂರು ಗ್ರಾಮದಲ್ಲಿರುವ ತಮ್ಮ ಹೆಂಡತಿಯ ಮನೆಗೆ ತೆರಳಿದ್ದು, ಸತ್ಯ ಅವರ ತಾಯಿ ಪಕ್ಕದ ಮನೆಗೆ ರಾತ್ರಿ ತೆರಳಿದ್ದ ಸಂದರ್ಭ ಕಳ್ಳರು ಮನೆಯ ಮುಂಭಾಗಿಲ ಬೀಗವನ್ನು ಒಡೆದು ಒಳ ನುಗ್ಗಿ ಬೀರುವಿನಲ್ಲಿದ್ದ ೨೦ ಗ್ರಾಂ ಚಿನ್ನ ಮತ್ತು ನಗದು ೧೪,೩೭೫ ರೂ.ಗಳನ್ನು ಕಳವು ಮಾಡಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಸೇರಿದಂತೆ ಶ್ವಾನದಳ ಮತ್ತು ಬೆರಳಚ್ಚುಗಾರರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.