ವೀರಾಜಪೇಟೆ, ಜ. ೯: ಗಡಿ ಭಾಗದಲ್ಲಿ ಸೂಕ್ತ ತಪಾಸಣೆ ಕೇಂದ್ರಗಳು ಇಲ್ಲದ ಕಾರಣ ತೆರಿಗೆ ವಂಚಿಸಿ ರಾಜ್ಯದ ಗಡಿ ಪ್ರವೇಶ ಮಾಡುವ ಅಂತರ್‌ರಾಜ್ಯ ವಾಹನಗಳಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗುತಿದ್ದು, ಜಿಲ್ಲೆಯಲ್ಲಿ ಎಲ್ಲಾ ಗಡಿ ಭಾಗದಲ್ಲಿ ಆರ್.ಟಿ.ಓ. ತಪಾಸಣಾ ಕೇಂದ್ರವನ್ನು ಆರಂಭಿಸುವAತೆ ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೆಷನ್‌ನ ಜಿಲ್ಲಾ ಶಾಖೆ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೆಷನ್ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ರಾಜ್ಯದ ಗಡಿಭಾಗವಾದ ವೀರಾಜಪೇಟೆ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಜಿಲ್ಲಾ ಘಟಕದ ಮಾಜಿ ಗೌರವಧ್ಯಕ್ಷ ಎಂ.ಎ. ರಫೀಕ್ ಮಾಧÀ್ಯಮದೊಂದಿಗೆ ಮಾತನಾಡಿ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಗಡಿದಾಟಿ ಪ್ರವಾಸಿ ವಾಹನಗಳು ಆಗಮಿಸುತ್ತಿವೆ. ಇಂತಹ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ತಪಾಸಣೆ ಕೇಂದ್ರಗಳು ಇಲ್ಲವಾಗಿದೆ. ಜಿಲ್ಲೆಯಲ್ಲಿ ಪ್ರವಾಸಿ ವಾಹನಗಳನ್ನು ನಂಬಿಕೊAಡು ಸಾವಿರಾರು ಸಂಖ್ಯೆಯಲ್ಲಿ ವಾಹನ ಚಾಲಕರು

(ಮೊದಲ ಪುಟದಿಂದ) ಮತ್ತು ಮಾಲೀಕರು ಜೀವನ ಸಾಗಿಸುತಿದ್ದಾರೆ. ವಾಹನಗಳ ಎಲ್ಲಾ ದಾಖಲೆಗಳನ್ನು ಕ್ರಮಬದ್ದವಾಗಿ ಹೊಂದಿದ್ದರೂ ಕೂಡ ಬಾಡಿಗೆಯಿಂದ ವಂಚಿತರಾಗಿದ್ದೇವೆ. ಆದರೆ ಅಂತರ್‌ರಾಜ್ಯದ ವಾಹನಗಳು ಯಾವುದೇ ತೆÀರಿಗೆಗಳನ್ನು ಕಟ್ಟದೆ ಸೂಕ್ತ ದಾಖಲೆಗಳು ಇಲ್ಲದೆ ರಾಜರೋಷ ವಾಗಿ ಗಡಿ ಪ್ರವೇಶ ಮಾಡಿ ಬಾಡಿಗೆ ಪಡೆದುಕೊಂಡು ಹಿಂದಿರುಗುತ್ತಿದೆ, ಇದಕ್ಕೆ ಕಾರಣ ಗಡಿಯಲ್ಲಿ ಸೂಕ್ತ ತಪಾಸಣೆ ಕೇಂದ್ರಗಳು ಇಲ್ಲದಿರುವುದು. ಆದ್ದರಿಂದ ಈ ಬಗ್ಗೆ ಸಂಬAಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯ ಎಲ್ಲಾ ಗಡಿಭಾಗದಲ್ಲಿ ರಸ್ತೆ ತಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೆಷನ್ ಜಿಲ್ಲಾ ಶಾಖೆಯ ನಿದೆೆÃðಶಕ ಬಿ.ವಿ. ಹೇಮಂತ್ ಮಾತನಾಡಿ, ಸಾರಿಗೆ ಇಲಾಖೆ ಮತ್ತು ಜಿಲ್ಲಾಡಳಿತ ಜನಪ್ರತಿನಿಧಿಗಳು ಗಡಿಯಲ್ಲಿ ಶಾಶ್ವತ ಆರ್.ಟಿ.ಓ ತಪಾಸಣಾ ಕೇಂದ್ರ ಅರಂಭಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕೊರತೆಯಿದೆ. ಕೆಲವೊಮ್ಮೆ ತೆರಿಗೆ ವಂಚಿಸಿ ಮತ್ತು ಇತರ ದಾಖಲೆಗಳು ಇಲ್ಲದೆ ಅಂತರ್‌ರಾಜ್ಯದ ವಾಹನಗಳು ಬರುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂತರ್‌ರಾಜ್ಯದಿAದ ಆಗಮಿಸುವ ವಾಹನಗಳನ್ನು ಪ್ರವಾಸಿ ಕೇಂದ್ರಗಳ ಸ್ಥಳದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅದರಂತೆ ದಾಖಲೆ ಪರಿಶೀಲನೆ ವೇಳೆ ಲೋಪ ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತಿದೆ. ಹೆಚ್ಚುವರಿಯಾಗಿ ಸಿಬ್ಬಂದಿಗಳನ್ನು ನೇಮಕಾತಿ ಮಾಡುವಂತೆಯೂ ಮತ್ತು ಸಂಚಾರಿ ಟಾಸ್ಕ್ಫೋರ್ಸ್ ನೀಡುವಂತೆಯು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದಾಖಲೆಗಳ ಪರಿಶೀಲನೆಗಾಗಿ ವೀರಾಜಪೇಟೆ ಮತ್ತು ಕುಟ್ಟ ಭಾಗದ ಪೊಲೀಸ್ ಅಧಿಕಾರಿ ಗಳೊಂದಿಗೆ ಮನವಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ನಿರೀಕ್ಷಕ ಶಿವಕುಮಾರ್ ಹೇಳಿದರು. ಈ ಸಂದರ್ಭ ಕರ್ನಾಟಕ ರಾಜ್ಯ ಟ್ಯಾಕ್ಸಿ ಡ್ರೆöÊರ‍್ಸ್ ಅಸೋಸಿಯೆಷನ್‌ನ ಜಿಲ್ಲಾ ಶಾಖೆಯ ಅಧ್ಯಕ್ಷ ಡಿ.ಆರ್. ವಿನೋದ್, ಉಪಾಧ್ಯಕ್ಷ ಅಖೀಲ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸೋಮವಾರಪೇಟೆ ನಿರ್ದೇಶಕರಾದ ರಾಖೀಬ್, ಮಂಜುನಾಥ್, ಗಗನ್, ಕೆಂಪೇಗೌಡ, ಪ್ರವೀಣ್, ಮಂಜು, ಮತ್ತು ಹರೀಶ್ ಅವರುಗಳು ಉಪಸ್ಥಿತರಿದ್ದರು.