ಮಡಿಕೇರಿ, ಜ. ೯: ನಗರದ ಕಾವೇರಿ ಕೇರಿ ಕೊಡವ ಸಂಘದ ೩೦ನೇ ವರ್ಷದ ಮಹಾಸಭೆಯು ಕೊಡವ ಸಮಾಜದ ಕಟ್ಟಡದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕಾವೇರಿ ಕೇರಿಯ ಅಧ್ಯಕ್ಷೆ ಬಲ್ಯಾಟಂಡ ಲತಾ ಚಂಗಪ್ಪ ವಹಿಸಿದ್ದರು. ಸಭೆಯಲ್ಲಿ ಸಾಧಕರಾದ ಕಲಿಯಂಡ ಸರಸ್ವತಿ ಚಂಗಪ್ಪ ಹಾಗೂ ಬೈರೇಡಿರ ವಿಜು ತಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಕೇರಿಯ ಸದಸ್ಯರಿಗೆ ವಿವಿಧ ಕ್ರೀಡಾ ಪೈಪೋಟಿ ಜರುಗಿದವು. ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾವೇರಿ ಕೇರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಉಳ್ಳಿಯಡ ಸಚಿತ ನಂಜಪ್ಪ ಪ್ರಾರ್ಥಿಸಿದರೆ, ಕಾರ್ಯದರ್ಶಿ ಅಳಮಂಡ ವಚನ್ ಸುಬ್ಬಯ್ಯ ಆಡಳಿತ ಮಂಡಳಿಯ ವರದಿ ವಾಚಿಸಿದರು. ಉಪಾಧ್ಯಕ್ಷೆ ಉಳ್ಳಿಯಡ ನಂದಾ ನಂಜಪ್ಪ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಾಳೆಯಡ ಸವಿತ ಪೂವಯ್ಯ ನಡೆಸಿಕೊಟ್ಟರು.