ಕೂಡಿಗೆ, ಜ. ೧೦: ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿಯಿಂದ ಪೈಪ್‌ಗಳ ಮೂಲಕ ನೀರನ್ನು ಎತ್ತಿ ಕೂಡ್ಲೂರು ಗ್ರಾಮದ ರೈತರ ಬೇಸಾಯದ ಜಮೀನಿಗೆ ಒದಗಿಸಲು ಈಗಾಗಲೇ ರೂ. ೧,೭೫ ಲಕ್ಷ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಏತ ನೀರಾವರಿ ಯೋಜನೆಗೆ ಸಂಬAಧಿಸಿದAತೆ ಕಾಮಗಾರಿ ನಡೆದು ಉದ್ಘಾಟನೆಗೆ ಸಿದ್ಧಗೊಂಡಿದೆ.
ಕೂಡ್ಲೂರು ಗ್ರಾಮದ ಕಾವೇರಿ ನದಿ ದಂಡೆಯ ಮೇಲೆ ಏತ ನೀರಾವರಿ ಯೋಜನೆಗೆ ಸುಸಜ್ಜಿತ ಕಟ್ಟಡ, ಅಧುನಿಕ ತಂತ್ರಜ್ಞಾನದ ಮೂರು ವಿದ್ಯುತ್ ಮೋಟಾರ್‌ಗಳು ಮತ್ತು ಹೊಳೆಯಿಂದ ನೀರನ್ನು ಎತ್ತಲು ಬೇಕಾಗುವ ಉತ್ತಮ ಗುಣಮಟ್ಟದ ಪೈಪ್‌ಗಳ ಅಳವಡಿಕೆ, ವಿದ್ಯುತ್ ಲೈನ್ ಅಳವಡಿಕೆ ಸೇರಿದಂತೆ ಏತ ನೀರಾವರಿ ಯೋಜನೆಗೆ ಬೇಕಾಗುವ ಎಲ್ಲಾ ಕಾಮಗಾರಿಗಳು ನಡೆದಿವೆ.
ನದಿಯಿಂದ ಪೈಪ್‌ಗಳ ಮೂಲಕ ನೀರು ಹರಿದು ಬಂದು ಬೃಹತ್ ಟ್ಯಾಂಕ್‌ನಲ್ಲಿ ಸಂಗ್ರಹವಾಗಿ ನಂತರ ಉಪ ಕಾಲುವೆಗಳ ಮೂಲಕ ರೈತರ ಜಮೀನಿಗೆ ತಲುಪಲು ಬೇಕಾಗುವ ಸಿಮೆಂಟ್ ಕಾಲುವೆಗಳ ಕಾಮಗಾರಿಯು ನಡೆದಿದ್ದು, ಕೂಡ್ಲೂರು ಸುತ್ತಮುತ್ತಲಿನ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೇಸಾಯ ಮಾಡಲು ಅನುಕೂಲವಾಗುವಂತೆ ನೀರಿನ ವ್ಯವಸ್ಥೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸಿದ್ಧತೆಗಳು ನಡೆದಿದೆ.
-ಕೆ.ಕೆ. ನಾಗರಾಜಶೆಟ್ಟಿ.