ಕೊಡಗು ರಾಜ್ಯದ ಪ್ರಥಮ ಸ್ಪೀಕರ್ ಬಿದ್ದಂಡ ಎಸ್. ಕುಶಾಲಪ್ಪ ಮತ್ತು ಆಪ್ತರ ಕನಸಿನ ಕೂಸು ಕೊಡಗು ವಿದ್ಯಾಲಯ. ಅದು ಆರಂಭಗೊAಡಾಗ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳನ್ನು ಮನೆ-ಮನೆಗಳಿಂದ ಕರೆತರುತ್ತಿದ್ದವರು ಕುಶಾಲಪ್ಪ ಅವರ ಪುತ್ರ ಬಿದ್ದಂಡ ಸುಬ್ಬಯ್ಯ. ಶಾಲೆ ಬೆಳೆಯಿತು. ಕಟ್ಟಡ, ಮೈದಾನ, ವಿದ್ಯಾರ್ಥಿಗಳ ಸಂಖ್ಯೆ ವಿಶಾಲವಾಗಿ ಹರಡಿತು. ಶಾಲಾ ಆಡಳಿತ ಮಂಡಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಸುಬ್ಬಯ್ಯ ಅವರ ದೃಷ್ಟಿಕೋನ ವಿಭಿನ್ನ. ಎಲ್ಲರೂ ಕುಣಿದು ಕುಪ್ಪಳಿಸುವ ಆರೋಗ್ಯವಂತ ಮಕ್ಕಳ ಬೆನ್ನು ತಟ್ಟುತ್ತಿದ್ದರೆ, ಸುಬ್ಬಯ್ಯ ಅವರ ದೃಷ್ಟಿಗೆ ನಡೆಯಲಾಗದ, ನೋಡಲಾಗದ, ಬುದ್ಧಿ ಓಡದ ಮಕ್ಕಳು, ಅವರೊಂದಿಗೆ ಮೌನವಾಗಿ ಕಣ್ಣೀರಿಡುವ ಪೋಷಕರ ಅಸಹಾಯಕ ಸ್ಥಿತಿ ಗೋಚರ ವಾಯಿತು.

ತಡಮಾಡದೆ ಬಿದ್ದಂಡ ಸುಬ್ಬಯ್ಯ, ಮೀನಾ ಕಾರ್ಯಪ್ಪ ಹಾಗೂ ತಂಡ ೧೯೯೬ರಲ್ಲಿ ಅಪೊರ್ಚ್ಯುನಿಟಿ ಶಾಲೆ ಆರಂಭ ಮಾಡಿತು. ಚಿಕ್ಕದಾಗಿ ಆರಂಭಗೊAಡ ಶಾಲೆಯಿಂದು ವಿಶೇಷ ಚೇತನರ ಭವಿಷ್ಯಕ್ಕೆ ರಾಜಮಾರ್ಗ ಒದಗಿಸುತ್ತಿದೆ. ಉಚಿತ ಓದು, ಬರಹ, ತರಬೇತಿ, ಆಟೋಟಗಳಲ್ಲಿ ಅವಕಾಶ, ವೃತ್ತಿಪರ ಚಟುವಟಿಕೆ, ಕಸೂತಿ ತರಬೇತಿ, ಕಲಾ ಮಾರ್ಗದರ್ಶನ, ಹೊಲಿಗೆ ಎಲ್ಲದರೊಂದಿಗೆ ಪ್ರೀತಿಹರಿಸುವ ಬೋಧಕವರ್ಗ, ತರಬೇತುದಾರರು ಇಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಆಪ್ತ ವಾತಾವರಣ ಒದಗಿಸುತ್ತಿದ್ದಾರೆ.

ಖರ್ಚು-ವೆಚ್ಚ ಸರಕಾರದಿಂದ ಅಲ್ಪ ಸಹಾಯ ಧನ ದೊರೆಯುತ್ತಿದ್ದು, ಸಂಸ್ಥೆಯ ಸಹಾಯ ಧನದಿಂದಲೇ ನಡೆಯುತ್ತಿದೆ.

ಇಪ್ಪತ್ತೆöÊದು ವಸಂತಗಳನ್ನು ಪೂರೈಸಿರುವ ಅಪೊರ್ಚ್ಯುನಿಟಿ ಶಾಲೆ ಜಸ್ಟೀಸ್ ಗೋವಿಂದ ಭಟ್, ಮೀನಾಕ್ಷಿ ಭಟ್ ಟ್ರಸ್ಟಿನ ಸಹಕಾರದಿಂದ ಎಚ್.ಡಿ..ಎಫ್. ಸಿ. ಬ್ಯಾಂಕ್ ಸಹಕಾರದಿಂದ ಅತ್ಯಾಧುನಿಕ ರೂಪು ಪಡೆದಿದೆ. ಅಂತರರಾಷ್ಟಿçÃಯ ಗುಣಮಟ್ಟದ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಕಂಪ್ಯೂಟರ್ ವಿಭಾಗ, ಸುಸಜ್ಜಿತ ಅಡುಗೆ ಕೋಣೆ, ಫಿಲಿಯೋಥೆರಪಿ ಮತ್ತು ಸೆನ್ಸರಿ ಕೋಣೆ, ಶ್ರವಣ ಕೇಂದ್ರ, ವೃತ್ತಿಪರ ತರಬೇತಿ ವಿಭಾಗ, ಕಸೂತಿ ವಿಭಾಗ ಮತ್ತು ಆಯಾ ವಿದ್ಯಾರ್ಥಿಯ ಕೌಶಲ್ಯ ಗುರುತಿಸಿ, ಅದಕ್ಕೆ ತಕ್ಕ ತರಬೇತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಾಡು, ಸಂಗೀತವೂ ತರಬೇತಿಯ ಒಂದು ಭಾಗ.

ಅರವತ್ತಕ್ಕೂ ಅಧಿಕ ಮಕ್ಕಳಿರುವ ಅಪೊರ್ಚ್ಯುನಿಟಿ ಶಾಲೆಯಲ್ಲಿ ಮಕ್ಕಳ ಕಲರವ ಸದಾ ಕೇಳುತ್ತಿರುತ್ತದೆ. ಇತರ ತರಬೇತಿಗಳೊಂದಿಗೆ ಚಾಕಲೇಟ್‌ಗಳು, ಕೇಕ್, ಬರ್ಗರ್, ರೋಲ್ಸ್ಗಳ ತಯಾರಿ ಕೂಡಾ ಆಕರ್ಷಕ ವಿಭಾಗ. ಜೊತೆಗೆ ಟೈಲರಿಂಗ್, ನೋಟ್‌ಪ್ಯಾಡ್, ಕ್ಯಾರಿಬ್ಯಾಗ್, ಗಿಫ್ಟ್ಚೀಲಗಳು, ಪುಟ್ಟ ಟವೆಲ್‌ಗಳು, ಕರ್ಚಿಫ್, ಟೇಬಲ್ ಮ್ಯಾಟ್, ಮೊಬೈಲ್ ಚೀಲ ಇತ್ಯಾದಿಗಳನ್ನು ವಿಶೇಷ ಚೇತನರು ಯಾರಿಗೂ ಕಡಿಮೆ ಇಲ್ಲ ಎಂಬAತೆ ಸುಂದರವಾಗಿ ತಯಾರಿಸುವುದನ್ನು ಕಲಿಯುತ್ತಾರೆ. ಜೊತೆಗೆ ಫಿನಾಯಿಲ್, ಕ್ಲೀನಿಂಗ್ ಪೌಡರ್, ಕಸದಿಂದ ರಸ, ಇವುಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಹೂತೋಟ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಮರುಬಳಕೆ ವಿಧಾನ ಇತ್ಯಾದಿ ತರಬೇತಿಯೇ ಅಲ್ಲದೆ ಆಟೋಟಗಳ ತರಬೇತಿಯೂ ವಿದ್ಯಾರ್ಥಿಗÀಳನ್ನು ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ.

ವಿದ್ಯಾರ್ಥಿಗಳು ತಯಾರಿಸಿದ ವಸ್ತುಗಳನ್ನು ಶಾಲೆಯಲ್ಲಿ ಹಾಗೂ ‘ಒನ್ ಮರ್ಕೆರಾ’ ಆವರಣದಲ್ಲೂ ಮಾರಾಟ ಮಾಡಲಾಗುತ್ತದೆ.

ಯಶೋಗಾಥೆ : ೧೯೯೬ರಲ್ಲಿ ಕಲ್ಪನಾಥ್ ಎಂಬ ಪುಟ್ಟ ಹುಡುಗ ಶಾಲೆ ಸೇರಿದ. ಪಿಸುಮಾತಷ್ಟೇ ಆಡಲು ಅವನಿಗೆ ಸಾಧ್ಯವಿದ್ದುದ್ದು, ಕಲ್ಪನಾಥ್ ನಿಧಾನವಾಗಿ ಆತ್ಮಸ್ಥೆöÊರ್ಯ ಬೆಳೆಸಿಕೊಂಡ. ಆಟೋಟಗಳಲ್ಲಿ, ಓದಿನಲ್ಲಿ ಮುಂದಾದ ಅಲಾಸ್ಕಾದಲ್ಲಿ ನಡೆದ ವಿಶೇಷ ಚೇತನರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸಿ ಎಲ್ಲರನ್ನೂ ಬೆರಗುಗೊಳಿಸಿದ. ಇಂದು ಆತ ವಿಶೇಷಚೇತನರ ವೃತ್ತಿ ತರಬೇತಿ ವಿಭಾಗದಲ್ಲಿ ಬೋಧಕ.

ಮತ್ತೊಬ್ಬ ವಿದ್ಯಾರ್ಥಿ ಪೊನ್ನಣ್ಣ, ರುಕ್ಸಾನ, ನಂದಕುಮಾರ್, ಮೈಕೇಲ್, ರಾಜೇಶ್, ಶ್ರೀನಾಥ್ ಹೀಗೆ ಹಲವು ವಿದ್ಯಾರ್ಥಿಗಳು ರಾಜ್ಯ-ರಾಷ್ಟçಮಟ್ಟದ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ. ಇಂತಹ ಮಕ್ಕಳನ್ನು ಪಡೆದೆವಲ್ಲ ಎಂದು ಹಿಂದೆ ದುಃಖಿಸುತ್ತಿದ್ದ ಪೋಷಕರು ಇವರ ಬೆಳವಣಿಗೆ ಕಂಡು ಇಂದು ಹೆಮ್ಮೆಪಡುತ್ತಿದ್ದಾರೆ. ಅಮೇಜ್ಹಾನ್, ವಿಪ್ರೋ ಹಾಗೂ ಇತರೆಡೆಗಳಲ್ಲೂ ಇಲ್ಲಿನ ವಿಶೇಷ ಚೇತನರು ಗೌರವಾನ್ವಿತ ಹುದ್ದೆಗಳನ್ನು ಗಳಿಸಿದ್ದಾರೆ.

ಅಪೊರ್ಚ್ಯುನಿಟಿ ಶಾಲೆ ಇನ್ನಷ್ಟು ಕನಸುಗಳನ್ನು ಹೊಂದಿದ್ದು, ದಾನಿಗಳು ಮುಂದೆ ಬಂದಲ್ಲಿ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ ಎಂದು ಟ್ರಸ್ಟಿಗಳಲ್ಲಿ ಒಬ್ಬರಾದ, ಮರು ನವೀಕರಣಕ್ಕೆ ಸೂತ್ರದಾರಿ ಯಾದ ಸಿ. ಎಸ್. ಗುರುದತ್ತ್ ಹೇಳುತ್ತಾರೆ.

-ಅನಂತ್

ಮಡಿಕೇರಿ.