ಮಡಿಕೇರಿ, ಜ. ೯: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಅಖಿಲ ಕೊಡವ ಸಮಾಜದ ವತಿಯಿಂದ ವಿಶೇಷ ಪೂಜೆ ನಡೆಯಿತು.

ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಗೌರವ ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ದೇವಾಲಯದ ಭಕ್ತಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ ಹಾಗೂ ನೂತನ ಆರ್ಥಿಕ ಉಪಸಮಿತಿಯ ಪದಾಧಿಕಾರಿಗಳಾದ ಕೀತಿಯಂಡ ವಿಜಯಕುಮಾರ್ (ಶರಿ), ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಬೊಳ್ಳೇರ ವಿನಯ್ ಅಪ್ಪಯ್ಯ, ಮಾಚಿಮಂಡ ರವೀಂದ್ರ, ಬಾಚಿರ ಜಗದೀಶ್ ಉಪಸ್ಥಿತರಿದ್ದರು.

ದೇವಾಲಯದ ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ದೇವನಡೆಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಜನಾಂಗದ ಶ್ರೇಯೋಭಿವೃದ್ಧಿಗಾಗಿ ಹಿರಿಯರು ಹುಟ್ಟು ಹಾಕಿದ ಸ್ವಾತಂತ್ರö್ಯ ಪೂರ್ವ ಮಾತೃ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ಆರ್ಥಿಕ ಪುನಶ್ಚೇತನಕ್ಕಾಗಿ ಜನಾಂಗದವರೆಲ್ಲರೂ ಕೈಜೋಡಿಸುವಂತೆ ಕೋರಿದರು.

ಈ ಸಂದರ್ಭ ನಾಲಡಿ ಗ್ರಾಮದ ದಾನಿಯೊಬ್ಬರು ರೂ. ೧೦ ಸಾವಿರದ ಚೆಕ್ ಅನ್ನು ಕಾಂಡAಡ ಜೋಯಪ್ಪ ಅವರ ಮೂಲಕ ಅಖಿಲ ಕೊಡವ ಸಮಾಜಕ್ಕೆ ಹಸ್ತಾಂತರಿಸಿದರು.

ದೇವಾಲಯದ ಅರ್ಚಕರಾ ಕುಶಭಟ್ ಮತ್ತು ಪಾರುಪತ್ಯೆಗಾರರಾದ ಪರದಂಡ ತಮ್ಮಪ್ಪ (ಪ್ರಿನ್ಸ್) ತಲಾ ರೂ. ೨,೦೦೧ನ್ನು ದೇಣಿಗೆಯಾಗಿ ಸಮಿತಿಯ ಪದಾಧಿಕಾರಿಗಳಿಗೆ ನೀಡಿದರು.