ಮಡಿಕೇರಿ, ಜ. ೧೦: ಮಡಿಕೇರಿಯ ಇಕ್ಷಾ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ತಾ. ೧೨ ರಂದು (ನಾಳೆ ) ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದೆ. ಇಕ್ಷಾ ಆಸ್ಪತ್ರೆಯ ಡಾ. ಚಿಣ್ಣಪ್ಪ ಅವರು ಕಣ್ಣಿನ ತಪಾಸಣೆ ನಡೆಸಲಿದ್ದು, ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಶಿಬಿರ ನಡೆಯಲಿದೆ.