ಶನಿವಾರಸಂತೆ, ಜ. ೧೦: ಇಲ್ಲಿನ ಮಂಜುನಾಥಸ್ವಾಮಿ ಪಾದಯಾತ್ರಾ ಸಮಿತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶನಿವಾರಸಂತೆಯಿAದ ಸುಬ್ರಹ್ಮಣ್ಯ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಫೆ. ೧೫ ರಿಂದ ೧೮ ರವರೆಗೆ ಪಾದಯಾತ್ರೆ ನಡೆಯಲಿದ್ದು, ಶನಿವಾರಸಂತೆ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಹ್ಮಣ್ಯ, ಕಡಬರಸ್ತೆ, ಮಾರ್ದಾಳ, ಇಜಲಂಪಾಡಿ, ಕೊಕ್ಕಡ, ಸೌತಡ್ಕ ಮೂಲಕ ಧರ್ಮಸ್ಥಳಕ್ಕೆ ತೆರಳಲಾಗುತ್ತಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.