ಮಡಿಕೇರಿ, ಡಿ. ೮: ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ, ಸಂಯುಕ್ತ ಹೋರಾಟ ಕರ್ನಾಟಕ ಸಹಕಾರದೊಂದಿಗೆ ಶೋಷಿತರ ಅರಿವಿನ ಗುರು ಕುದ್ಮಲ್ ರಂಗರಾವ್ ಸ್ಮರಣೆಯಲ್ಲಿ ಮಂಗಳೂರು ಭಾವುಟಗುಡ್ಡೆಯ ಕೆದಂಬಾಡಿ ರಾಮಯ್ಯ ಗೌಡ ಪುತ್ಥಳಿಯಿಂದ ಆರಂಭಗೊAಡ ಭಾವೈಕ್ಯತಾ ಜಾಥಾ ಮಡಿಕೇರಿಗೆ ತಲುಪಿತು.

ರೈತ ಸಂಘದ ಪ್ರಮುಖರು ಜಾಥಾವನ್ನು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬರಮಾಡಿಕೊಂಡರು. ರಾಜ್ಯದಲ್ಲಿ ಸಾಮರಸ್ಯ ಮರುಸ್ಥಾಪಿಸಬೇಕು, ಎಲ್ಲಾ ಸಂಸ್ಥೆಗಳಲ್ಲಿ ಆದ್ಯತೆ ಮೇರೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು, ಕೃಷಿ ಉತ್ಪನ್ನಗಳ ಕನಿಷ್ಟ ಬೆಂಬಲ ಬೆಲೆ ಹಾಗೂ ಪ್ರೊಕ್ಯೂರ್ಮೆಂಡ್ ನೀತಿ ಕಾನೂನಾತ್ಮಕಗೊಳಿಸಬೇಕು, ಶೋಷಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಗೆ ಕ್ರಮಕೈಗೊಳ್ಳಬೇಕು, ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಬೇಕು, ಸಂವಿಧಾನವನ್ನು ಕಡ್ಡಾಯವಾಗಿ ಪಠ್ಯಕ್ರಮದಲ್ಲಿ ಸೇರಿಸಬೇಕು, ಶಿಕ್ಷಣದ ಖಾಸಗೀಕರಣ ನಿಲ್ಲಿಸಬೇಕು, ಕಾರ್ಮಿಕ ಕಾಯ್ದೆ ಮರುಜಾರಿಮಾಡಬೇಕು, ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಜಾಥಾ ಹಮ್ಮಿಕೊಳ್ಳಲಾಗಿದೆ. ತಾ. ೧೧ ರಂದು ಬೆಂಗಳೂರು ಸ್ವಾತಂತ್ರö್ಯ ಉದ್ಯಾನದಲ್ಲಿ ಜಾಥಾ ಸಮಾರೋಪಗೊಳ್ಳಲಿದೆ.

ಈ ಸಂದರ್ಭ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜೆಸಿಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಸಂಚಾಲಕ ಕೆ.ವಿ. ಭಟ್, ರೈತ ಕೃಷಿ ಕಾರ್ಮಿಕ ಸಂಘದ ಪ್ರಮುಖರ ಹೆಚ್.ಪಿ. ಶಿವಪ್ರಕಾಶ್, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ರೈತ ಮುಖಂಡ ಬಸವರಾಜ್, ಜಿಲ್ಲಾ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪ್ರಮುಖರುಗಳಾದ ಆರ್. ಡಿ. ಜಗದೀಶ್, ಎಸ್.ಜಿ. ಮರಿಸ್ವಾಮಿ, ಎಸ್.ಎಸ್. ಸುರೇಶ್ ಹಾಜರಿದ್ದರು.