ಕುಶಾಲನಗರ, ಜ. ೯ : ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮದ ಸ್ಥಿರ-ಚರ ಆಸ್ತಿಗಳ ದಾಖಲೆಗಳನ್ನು ಕುಶಾಲನಗರ ಪುರಸಭೆಗೆ ಹಸ್ತಾಂತರಿಸುವ ಕಾರ್ಯ ಪೂರ್ಣಗೊಂಡಿದೆ.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು, ಸೋಮವಾರ ಸುಮಾರು ೧೯೭ ಪುಟಗಳ ವರದಿಯನ್ನು ದಾಖಲೆ ಕಡತಗಳೊಂದಿಗೆ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯ್ಕ್ ಅವರಿಗೆ ಹಸ್ತಾಂತರಿಸಿದರು. ಈ ಮೂಲಕ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕುಶಾಲನಗರ ಪುರಸಭೆಗೆ ವಿಲೀನಗೊಳ್ಳುವ ಕಾರ್ಯ ಪೂರ್ಣಗೊಳ್ಳುವುದರೊಂದಿಗೆ ಕಳೆದ ೬ ತಿಂಗಳುಗಳಿAದ ನಡೆಯುತ್ತಿದ್ದ ಕೆಲವು ಗೊಂದಲಗಳಿಗೆ ಮುಕ್ತಿ ದೊರೆತಂತಾಗಿದೆ.
ಪAಚಾಯಿತಿಯ ಅಭಿವೃದ್ಧಿ ಅಧಿಕಾರಿ ಹುದ್ದೆ ಹೊರತುಪಡಿಸಿ ಉಳಿದ ಎಲ್ಲಾ ಸಿಬ್ಬಂದಿಗಳನ್ನು ಕುಶಾಲನಗರ ಪುರಸಭೆಗೆ ತಾತ್ಕಾಲಿಕ ವಾಗಿ ವರ್ಗಾಯಿಸಲಾಗಿದೆ.ಸುಮಾರು ೫ ರಿಂದ ೬ ಸಾವಿರ ಕಡತ ಮತ್ತು ದಾಖಲೆಗಳನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್ ಸುಮೇಶ್ ತಿಳಿಸಿದ್ದಾರೆ. ಹಸ್ತಾಂತರ ಕಾರ್ಯ ಸಂದರ್ಭ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸಹಾಯಕ ನಿರ್ದೇಶಕ ರವೀಶ್ ಮತ್ತು ಪಂಚಾಯಿತಿ ಸಿಬ್ಬಂದಿಗಳು ಇದ್ದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಡಿಸೆಂಬರ್ ೮ ರಂದು ಅಧಿಸೂಚನೆ ಪ್ರಕಟಗೊಂಡಿದ್ದು, ಮುಳ್ಳುಸೋಗೆ ಕಂದಾಯ ಗ್ರಾಮ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮಾದಪಟ್ಟಣ ಗ್ರಾಮದ ಆಯ್ದ ಭಾಗಗಳನ್ನು ಪುರಸಭೆಗೆ ವಿಲೀನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ೨೩ ವಾರ್ಡ್ಗಳ ಪುನರ್ ವಿಂಗಡಣೆಯಾಗಿ ಪ್ರಕ್ರಿಯೆ ಸಂಪೂರ್ಣಗೊAಡ ಬೆನ್ನಲ್ಲೇ ಪುರಸಭೆಗೆ ನೂತನ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಲಿದೆ.
-ಚಂದ್ರಮೋಹನ್