ಮುಳ್ಳೂರು, ಜ. ೮: ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಬೃಹತ್ ಶೌರ್ಯ ಯಾತ್ರೆ ಕಾರ್ಯಕ್ರಮ ನಡೆಯಿತು. ಗುಡುಗಳಲೆ ಜಂಕ್ಷನ್‌ನಿAದ

(ಮೊದಲ ಪುಟದಿಂದ) ಹೊರಟು ಮುಖ್ಯ ರಸ್ತೆ, ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದ ಮೂಲಕ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಯಾತ್ರೆ ನಡೆಯಿತು. ದಕ್ಷಿಣ ಪ್ರಾಂತ್ಯ ಭಜರಂಗದಳದ ಸಹ ಸಂಚಾಲಕ ಮುರಳಿ ಕೃಷ್ಣ ಹಸ್ಸಂತಡ್ಕ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಹಾಗೂ ಹಿಂದೂಪರ ಸಂಘಟನೆಯ ಪ್ರಮುಖರು ಹಾಗೂ ನೂರಾರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಶೌರ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂಗಳು ಮತಾಂತರದ ವಿರುದ್ಧ ಜಾಗೃತರಾಗಿರಬೇಕು ಎಂದರು.

ಭಜರAಗದಳ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಮುರುಳಿ ಕೃಷ್ಣ ಹಸ್ಸಂತಡ್ಕ ಮಾತನಾಡಿ, ಹಿಂದೂಗಳ ಮತಾಂತರವಾಗುತ್ತಿದ್ದರೂ ಹಿಂದೂ ಸಮಾಜ ಮೌನವಹಿಸಿರುವುದು ಸರಿಯಲ್ಲ. ಎಲ್ಲರೂ ಮತಾಂತರದ ವಿರುದ್ಧ ಧ್ವನಿ ಎತ್ತಬೇಕೆಂದರು.