ಗೋಣಿಕೊಪ್ಪಲು, ಜ. ೮: ಪ್ರತಿ ಮಕ್ಕಳಲ್ಲಿಯೂ ಪ್ರತಿಭೆಗಳಿದ್ದೂ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿಯತ್ತ ಸಾಗಬೇಕು ಎಂದು ‘ಮೋಟಿವೇಷನ್ ಗುರು’ ಎಂದೇ ಪ್ರಖ್ಯಾತರಾಗಿರುವ, ಅಂರ‍್ರಾಷ್ಟಿçÃಯ ಕ್ರೀಡಾಪಟು ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಗೋಣಿಕೊಪ್ಪಲುವಿನ ಕಾಲ್ಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾಲ್ಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಕೊಡಗು ಪ್ರೆಸ್ ಕ್ಲ್ಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಲೋಗೊ ಬಿಡುಗಡೆಗೊಳಿಸಿ, ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಗಮಿಸಿದ್ದ ಜಿಲ್ಲೆಯ ವಿವಿಧೆಡೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅರ್ಜುನ್ ದೇವಯ್ಯ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮುಂದೊAದು ಉತ್ತಮ ಸಾಧನೆ ಮಾಡಲು ತಮ್ಮಲ್ಲಿ ತಾವೇ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಸಾಧನೆ ದೊಡ್ಡದಿರಲಿ ಸಣ್ಣದಿರಲಿ, ಸಾಧನೆ ಮಾಡಿದ ಕೂಡಲೇ ಯಾರೂ ಕೂಡ ಅಹಂಕಾರದಿAದ ವರ್ತಿಸಬಾರದು, ಮೊಬೈಲ್‌ಗಳು ಅವಶ್ಯಕತೆಗೆ ತಕ್ಕಂತೆ ಬಳಕೆಯಾಗಬೇಕು ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕರಾದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಜಿಲ್ಲಾಮಟ್ಟದ ಚಿತ್ರ ಕಲಾ ಸ್ಪರ್ಧೆಯನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಾಜಕಾರಣಿಗಳು ದಾರಿ ತಪ್ಪುವ ವೇಳೆ ವ್ಯಂಗ್ಯ ಚಿತ್ರಗಳ

(ಮೊದಲ ಪುಟದಿಂದ) ಮೂಲಕ ಅವರನ್ನು ಕುಟುಕಿ ಅವರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲೆಯಿಂದ ಸಾಧ್ಯವಾಗುತ್ತಿದೆ. ವಿವಿಧ ರೀತಿಯಲ್ಲಿ ಚಿತ್ರಕಲೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಆ್ಯನಿಮೇಷನ್ ಕೋರ್ಸ್ಗಳಿಗೆ ವಿಶೇಷ ಬೇಡಿಕೆ ಇದ್ದು ಇದರಲ್ಲಿ ಉತ್ತಮ ಅವಕಾಶಗಳು ಲಭಿಸುತ್ತಿವೆ. ಚಲನಚಿತ್ರ ವಿಭಾಗದಲ್ಲಿ ಆ್ಯನಿಮೇಷನ್ ಅನಿವಾರ್ಯತೆಯಿದೆ. ಇಂಜಿನಿ ಯರಿಂಗ್ ವಿಭಾಗದಲ್ಲಿಯು ಕಲೆ, ವಿನ್ಯಾಸಕ್ಕೆ ದೊಡ್ಡ ಮಹತ್ವವಿದ್ದು ಕಲೆಗೆ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗು ಪ್ರೆಸ್ ಕ್ಲಬ್‌ಗೆ ೨೫ ವರ್ಷ ತುಂಬುವ ಸುಸಂದರ್ಭದಲ್ಲಿ ಪ್ರತಿ ತಿಂಗಳು ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬೆಳ್ಳಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಕೊಡಗಿನ ಎಲ್ಲಾ ಭಾಗದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ಪ್ರತಿ ತಿಂಗಳು ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವುದು ಬೆಳ್ಳಿ ಮಹೋತ್ಸವದ ವಿಶೇಷತೆಯಾಗಿದೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷೆ ಸವಿತ ರೈ, ಕಾಲ್ಸ್ ವಿದ್ಯಾ ಸಂಸ್ಥೆಯ ಕನ್ನಡ ಶಿಕ್ಷಕಿ ಸಣ್ಣುವಂಡ ಶಕು ಮಂದಣ್ಣ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಐಮಂಡ ಗೋಪಾಲ್ ಸೋಮಯ್ಯ ಸ್ವಾಗತಿಸಿದರು. ಪ್ರಚಾರ ಸಮಿತಿಯ ಅಧ್ಯಕ್ಷ ಸುನೀಲ್ ಪೊನ್ನಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುತ್ತಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಸದಸ್ಯ ಪುತ್ತಂ ಪ್ರದೀಪ್ ವಂದಿಸಿದರು. ಚಿತ್ರ ಕಲಾವಿದರಾದ ಶಿಕ್ಷಕ ಸತೀಶ್ ಆರಂಭದಲ್ಲಿ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು. ಚಿತ್ರ ಕಲಾವಿದ ರೂಪೇಶ್ ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತೀರ್ಪುಗಾರರಾಗಿ ರಾಮ್ ಗೌತಮ್ ಹಾಗೂ ರೂಪೇಶ್ ನಾಣಯ್ಯ ಭಾಗವಹಿಸಿದ್ದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ನಿರ್ದೇಶಕ ಮಂಜುನಾಥ್, ತಾಲೂಕು ಪತ್ರಕರ್ತ ಸಂಘದ ಪದಾಧಿಕಾರಿಗಳಾದ ಎನ್.ಎನ್. ದಿನೇಶ್, ಜಗದೀಶ್ ಜೋಡುಬೀಟಿ, ಮಂಡAಡ ಅಶೋಕ್, ದರ್ಶನ್, ಸಿಂಗಿ ಸತೀಶ್, ಚನ್ನನಾಯಕ್, ಪುತ್ತಮ್ ಪ್ರದೀಪ್, ಅಜಿತ್ ಕರುಂಬಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.