ಮಡಿಕೇರಿ, ಜ. ೭: ಕಳೆದ ೧೨ ದಿನಗಳಿಂದ ನಡೆಯುತ್ತಿದ್ದ ಕ್ವಾರಿ - ಕ್ರಷರ್ ಮಾಲೀಕರ ಪ್ರತಿಭಟನೆಯನ್ನು ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಕೈಬಿಡಲಾಗಿದೆ. ಮಾಲೀಕರು ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದರಿಂದ ರಾಜ್ಯಾದ್ಯಂತ ಭಾರೀ ಸಮಸ್ಯೆ ಎದುರಾಗಿತ್ತು. ಎಂ.ಸ್ಯಾAಡ್, ಜಲ್ಲಿಕಲ್ಲು, ಸೈಜುಕಲ್ಲು ಸೇರಿದಂತೆ ವಿವಿಧ ಬಗೆಯ ಕೆಲಸಗಳು ಸ್ಥಗಿತಗೊಂಡು ಬಹುತೇಕ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳ ಮೇಲೆ ಹೊಡೆತವುಂಟಾ ಗಿತ್ತು. ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿ ತ್ತಲ್ಲದೆ, ಲಾರಿ ಚಾಲಕರು- ಮಾಲೀಕರೂ ಸಮಸ್ಯೆಗೆ ಒಳಗಾಗಿ ಇದರ ಪರಿಹಾರಕ್ಕೆ ಆಗ್ರಹಿಸಿ ಅವರುಗಳೂ ಕೂಡ ಬೀದಿಗಿಳಿಯುವಂತಾಗಿತ್ತು.

ಇದೀಗ ನಿನ್ನೆ ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಗಿದ್ದು, ಎದುರಾಗಿದ್ದ ಸಮಸ್ಯೆ ಸದ್ಯಕ್ಕೆ ಬಗೆಹರಿದಂತಾಗಿದೆ. ನಿನ್ನೆ ರಾತ್ರಿ ಈ ಬಗ್ಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಧಾನ ನಡೆಸುವಲ್ಲಿ ಯಶಸ್ವಿಯಾಗಿ ದ್ದಾರೆ. ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮ (ಕೆ.ಎಂ.ಎA. ಸಿ.ಆರ್) ತಿದ್ದುಪಡಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓರ‍್ಸ್ ಅಸೋಸಿಯೇಷನ್ ಕರೆಯಂತೆ ಡಿ.೨೧ರಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾನೂನುಬದ್ಧ ಗಣಿಗಾರಿಕೆಗೆ ಸೂಕ್ತ ನಿಯಮಗಳನ್ನು ಜಾರಿಗೆ ತರಲಾಗುವುದು ಹಾಗೂ ಇತರ ಬೇಡಿಕೆ ಈಡೇರಿಸಲು ಸರಕಾರ ಬದ್ಧವಾಗಿದೆ ಎಂಬ ಸಿ.ಎಂ. ಭರವಸೆಯಂತೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಸಮಸ್ಯೆ ಉದ್ಭವವಾಗಿತ್ತು. ಹಲವಷ್ಟು ಕಾರ್ಮಿಕರು ಕೆಲಸವಿಲ್ಲದಂತಾಗಿ ಬೇರೆ ರಾಜ್ಯಗಳತ್ತ ಮುಖ ಮಾಡಿದ್ದರು.

ಡಿ.೩೦ರಂದು ಲಾರಿ ಚಾಲಕ - ಮಾಲೀಕರ ಸಂಘದಿAದಲೂ ಪ್ರತಿಭಟನೆ ನಡೆದಿತ್ತು.

ಇದೀಗ ಪ್ರತಿಭಟನೆ ವಾಪಸಾತಿ ಯಿಂದಾಗಿ ವಿವಿಧ ನಿರ್ಮಾಣ ಕಾರ್ಯಗಳಿಗೆ ಮತ್ತೆ ಚಾಲನೆ ಸಿಗಬೇಕಾಗಿದೆ.