ಗೋಣಿಕೊಪ್ಪಲು, ಜ. ೮: ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಇತ್ತೀಚೆಗೆ ವಿಜೃಂಭಣೆಯಿAದ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮದ್ರೀರ ಪಿ. ವಿಷ್ಣು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮೈಸೂರು ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಎಂ.ಪಿ. ರೇಖಾ ವಸಂತ್ ವಿದ್ಯಾರ್ಥಿಗಳು ಮೊಬೈಲ್ನ ದಾಸರಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಚ್ಚಮಾಡ ಬಿ. ಸುಬ್ರಮಣಿ, ಕಾರ್ಯದರ್ಶಿ ಕಟ್ಟೇರ ಸುಶೀಲ ಅಚ್ಚಪ್ಪ, ಖಜಾಂಚಿ ಸಂದೀಪ್, ನಿರ್ದೇಶಕರುಗಳಾದ ಅಜ್ಜಮಾಡ ಬೋಪಣ್ಣ, ಕಳ್ಳಂಗಡ ರೆಜಿತ್ ಪೂವಣ್ಣ, ಕುಞಂಗಡ ರಮೇಶ್, ವಿನಯ್ ಎಸ್.ಎಂ. ಉಪಸ್ಥಿತರಿದ್ದರು.
ಪ್ರಾಂಶುಪಾಲ ಮುಲ್ಲೇಂಗಡ ಎಂ. ಸೋಮಯ್ಯ ವಿದ್ಯಾಸಂಸ್ಥೆಯ ಚಟುವಟಿಕೆಗಳ ಮಾಹಿತಿ ಒದಗಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ರತ್ನಮ್ಮ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಕೆ.ಎಂ. ಪನ್ನ, ನಾಗೇಶ್ ಎನ್.ಕೆ. ಹಾಗೂ ಕುಞಂಗಡ ಬೋಸ್ ಮಾದಪ್ಪ, ಮಚ್ಚಮಾಡ ಮನು ಕುಶಾಲಪ್ಪ, ಕಾಳಿಮಾಡ ಬೆಳ್ಯಪ್ಪ ಹಾಗೂ ಮತ್ತಿತರರು ಹಾಜರಿದ್ದರು.
ಆಡಳಿತ ಮಂಡಳಿ ವತಿಯಿಂದ ವಿವಿಧ ಸಾಧನೆ ಮಾಡಿದ ಅನೇಕ ಪ್ರತಿಭಾವಂತರಿಗೆ, ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಡಾ.ಎಂ.ಪಿ. ರೇಖಾ ವಸಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೌಢಶಾಲೆ ವಿಭಾಗದ ಶಿಕ್ಷಕರುಗಳಾದ ನಾಗೇಶ್ ಎನ್.ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.