ಕೊಡ್ಲಿಪೇಟೆ, ಜ. ೮: ಕೊಡ್ಲಿಪೇಟೆ ಯೂತ್ಸ್ ವತಿಯಿಂದ ಆಯೋಜಿಸಿದ್ದ ಮೊದಲನೇ ವರ್ಷದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚೇತನ್ ಮತ್ತು ಚಿಂತನ್ ಜೋಡಿಯ ವಿನ್ ಹಂಟರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಜುಬೈರ್ ಮತ್ತು ಸುಮಂತ್ ಜೋಡಿಯ ಜುಬೈರ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೂರನೇ ಸ್ಥಾನವನ್ನು ರಾಕೇಶ್ ಮಾಸ್ಟರ್ ಮತ್ತು ದೀಕ್ಷಿತ್ ಜೋಡಿಯ ಜಿಎಂಪಿ ಕೊಡ್ಲಿಪೇಟೆ ತಂಡ ಪಡೆಯಿತು.
ಪಂದ್ಯಾವಳಿಯನ್ನು ಉದ್ಬಾಟಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹರಪಳ್ಳಿ ರವೀಂದ್ರ ಅವರು, ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ರೀಡಾಕ್ಷೇತ್ರದಲ್ಲೂ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯತ್ತಲೂ ಗಮನ ಹರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದ ಶ್ರೀರುದ್ರಮುನಿ ಸ್ವಾಮೀಜಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಿತ್ ಗೌಡ, ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ವಿಎಸ್‌ಎಸ್‌ಎನ್ ಬ್ಯಾಂಕ್ ನಿರ್ದೇಶಕ ಜೆ.ಕೆ. ತೇಜ್‌ಕುಮಾರ್, ಎಸ್.ವಿ. ಸಿದ್ದೇಶ್, ಪೊಲೀಸ್ ಮುಖ್ಯಪೇದೆ ಡಿಂಪಲ್, ಸುನಿಲ್, ಉಪನ್ಯಾಸಕ ಪವಾರ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯ ಹನೀಫ್, ವಿನಯ್ ಬೆಂಗಳೂರು, ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶಿಕ್ಷಕ ಸತೀಶ್ ದೊಡ್ಡಕೊಡ್ಲಿ ಕಾರ್ಯಕ್ರಮ ನಿರ್ವಹಿಸಿದರು.
ಪಂದ್ಯಾವಳಿಯ ಆಯೋಜಕರಾದ ಕೊಡ್ಲಿಪೇಟೆ ಯೂತ್ಸ್ನ ಲತೇಶ್ ಶೆಟ್ಟಿ , ಅಶ್ವಥ್, ಮಂಜುನಾಥ್, ಬಾಲು ಗೌಡ, ಕಾಂತರಾಜ್, ನಿಖಿಲ್, ನವೀನ್ ಪೂಜಾರಿ, ಪೃಥ್ವಿ, ದೀಕ್ಷಿತ್, ರಾಕೇಶ್, ಕುಮಾರ್, ನಂದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.