ಮಡಿಕೇರಿ, ಜ. ೭: ಬಣ್ಣದ ಪುಸ್ತಕದ ಓದಿನ ಜೊತೆ ನೈಜ ಜೀವನದ ಪರಿಚಯ ಮಾಡಿಸುವ ಉದ್ದೇಶದಿಂದ ವೀರಾಜಪೇಟೆಯ ಕಾವೇರಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ವೀರಾಜಪೇಟೆಯ ಕೂರ್ಗ್ ಎವಿನ್ಯೂ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿದರು.

ಶಿಕ್ಷಕಿಂiÀiರಾದ ಅಮೃತ ಸಿ. ಹಾಗೂ ನಿವ್ಯ ದೇವಯ್ಯ ಅವರು ಮಾರುಕಟ್ಟೆಯಲ್ಲಿ ದೊರೆಯುವ ತರಕಾರಿ ಹಾಗೂ ಇತರ ವಸ್ತುಗಳ ಬಗ್ಗೆ ಪುಟಾಣಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸಿ ಅದರ ಬಗ್ಗೆ ವಿವರಿಸಿದರು. ಪುಟಾಣಿಗಳು ವಿಸ್ಮಯದಿಂದ ವಸ್ತುಗಳನ್ನು ವೀಕ್ಷಿಸಿ ಆನಂದಿಸಿದರು.

ತದನAತರ ಪೂಮಾಲೆ ಮಂದ್‌ಗೆ ತೆರಳಿ ವಿದ್ಯಾರ್ಥಿಗಳು ವಿವಿಧ ರೀತಿಯ ಆಟಗಳನ್ನು ಆಡಿ ಕುಣಿದು ಕುಪ್ಪಳಿಸಿದರು. ಈ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಸಹಶಿಕ್ಷಕಿಯರಾದ ಉಷಾ ಬಿ.ಪಿ., ಕಲ್ಪ ಟಿ.ಜಿ., ಲಾವಣ್ಯ ಬಿ.ವಿ., ಅಕ್ಷಿತಾ ಪೊನ್ನಮ್ಮ, ಶ್ರುತಿ ಕೆ.ಎನ್. ಹಾಗೂ ವೀಣಾ ಕೆ.ಎನ್. ಪಾಲ್ಗೊಂಡಿದ್ದರು.