ಕೂಡಿಗೆ, ಜ. ೮: ಕೂಡಿಗೆ ಗ್ರಾ.ಪಂ. ಸದಸ್ಯ ಅರುಣ್ ರಾವ್ ಅವರ ಮೇಲೆ ಹಲ್ಲೆ ನಡೆದಿದೆ. ಕೂಡಿಗೆ ಗ್ರಾಪಂ ಅಧ್ಯಕ್ಷೆ ಮಂಗಳಾ ಅವರ ಪತಿ ಪ್ರಕಾಶ್ ಭಾನುವಾರ ಸಂಜೆ ಕೂಡಿಗೆ ಡೈರಿ ಬಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಹಲ್ಲೆಗೊಳಗಾದ ಅರುಣ್ ರಾವ್ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಪ್ರಕಾಶ್ ಕೂಡ ತನ್ನ ಮೇಲೆ ಅರುಣ್ ರಾವ್ ಹಲ್ಲೆ ಮಾಡಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೂಡಿಗೆ ಗ್ರಾ.ಪಂ. ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಅರುಣ್ ರಾವ್ ಮತ್ತಿತರರು ಸಭಾ ತ್ಯಾಗ ನಡೆಸಿದ್ದರು. ಮಂಗಳಾ ಪ್ರಕಾಶ್ ಅವರು ಸಭಾ ತ್ಯಾಗ ಮಾಡಿದ ಸದಸ್ಯರ ಮೇಲೆ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಈ ಹಲ್ಲೆ ಪ್ರಕರಣ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.