ಸುಂಟಿಕೊಪ್ಪ, ಜ. ೭: ಸುಂಟಿಕೊಪ್ಪ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ತಾ. ೮ ರಂದು (ಇಂದು) ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದ್ದಾರೆ.

ಬೆಳಿಗ್ಗೆ ೧೦.೩೦ ಗಂಟೆಗೆ ೭ನೇ ಹೊಸಕೋಟೆಯ ಫಿಲಾ ಸಭಾಂಗಣದಲ್ಲಿ, ೧೨ ಗಂಟೆಗೆ ಗುಂಡುಗುಟ್ಟಿ ಮಂಜನಾಥಯ್ಯ ಕೃಷಿಪತ್ತಿನ ಸಹಕಾರ ಸಮುದಾಯ ಭವನದಲ್ಲಿ, ಮಧ್ಯಾಹ್ನ ೨.೩೦ ಗಂಟೆಗೆ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಸಂಜೆ ೪.೩೦ ಗಂಟೆಗೆ ಚೆಟ್ಟಳ್ಳಿ ಹಾಗೂ ೬.೩೦ ಗಂಟೆಗೆ ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.