ಕೂಡಿಗೆ, ಜ. ೭: ಹುದುಗೂರು ಮತ್ತು ಬೆಂಡೆಬೆಟ್ಟದ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಬೇಲಿ ನಿರ್ಮಾಣ ಕಾರ್ಯ ಆರಂಭಗೊAಡಿದೆ. ಹುದುಗೂರು ಗ್ರಾಮದ ರೈತ ಹಿತರಕ್ಷಣಾ ಸಮಿತಿಯ ವತಿಯಿಂದ ಈಗಾಗಲೇ ಹುದುಗೂರು ಮಾವಿನಹಳ್ಳ ಕಾಳಿದೇವನ ಹೊಸೂರು ಮಾದಲಾಪುರ ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಬೆಳೆ ನಷ್ಟವಾಗಿದ್ದು, ಆದ್ದರಿಂದ ಗ್ರಾಮಸ್ಥರು ಅನೇಕ ಬಾರಿ ಸಭೆ ನಡೆಸಿ ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಅರಣ್ಯ ಸಚಿವರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆನೆ ಕಂದಕ ಮತ್ತು ಸೋಲಾರ್ ಅಳವಡಿಕೆ ಕಾರ್ಯ ಆರಂಭವಾಗಿದೆ.

ಹುದುಗೂರು ವ್ಯಾಪ್ತಿಯಲ್ಲಿ ಮೂರು ಕಿಮೀ ದೂರದವರೆಗೆ ಆನೆ ಕಂದಕ, ಬೆಂಡೆಬೆಟ್ಟದ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಬೇಲಿ ಅಳವಡಿಕೆ ಕಾರ್ಯ ನಡೆಯಲಿದೆ.