ಗೋಣಿಕೊಪ್ಪಲು, ಜ. ೬: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ೨ ಜಾನುವಾರು ಸಂರಕ್ಷಣಾ ಅಧಿನಿಯಮಕ್ಕೆ ಸಂಬAಧಿಸಿದAತೆ, ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ ಕೇರಳ ರಾಜ್ಯದ ಮಾನಂದವಾಡಿ ತಾಲೂಕಿನ ಪಾಂಡಿಕಡವುವಿನ ಉಬೈದ್ (೩೨) ಎಂಬಾತನನ್ನು ಕುಟ್ಟ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂದಿತ ಆರೋಪಿಯನ್ನು ಕೇರಳ ರಾಜ್ಯದ ಮಾನಂದವಾಡಿ ತಾಲೂಕಿನ ಪಾಂಡಿ ಕಡವು ಗ್ರಾಮದ ದನದ ಮಾರುಕಟ್ಟೆಯ ಬಳಿಯ ಬಾಡಿಗೆ ಮನೆಯಿಂದ ದಸ್ತಗಿರಿ ಮಾಡಲಾಗಿದೆ.

ಈತನ ಮೇಲೆ ಕೊಡಗು ಜಿಲ್ಲೆಯ ಕುಟ್ಟ, ವೀರಾಜಪೇಟೆ ನಗರ, ವೀರಾಜಪೇಟೆ ಗ್ರಾಮಾಂತರ, ಸಿದ್ದಾಪುರ, ಹಾಗೂ ಶ್ರೀಮಂಗಲ ಠಾಣೆಗಳಲ್ಲಿ ೧೩ ಪ್ರಕರಣಗಳು ಬಾಕಿ ಇವೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ,. ವೀರಾಜಪೇಟೆ ಉಪ ವಿಭಾಗದ ಉಪ ಅಧೀಕ್ಷಕ ನಿರಂಜನರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ ಸಿ.ಎ. ನೇತೃತ್ವದಲ್ಲಿ ಪಿಎಸ್‌ಐ ಮಹದೇವ್, ಪಿಎಸ್‌ಐ ರವಿ, ಸಿಬ್ಬಂದಿಗಳಾದ ಎಂ.ಡಿ.ಮನು, ರಂಜಿತ್, ರಾಜೇಶ್, ಹರೀಶ್ ಹಾಗೂ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.