ಗೋಣಿಕೊಪ್ಪಲು, ಜ. ೭: ರಾಜ್ಯ ಹೆದ್ದಾರಿ ಸಮೀಪದ ನಾಗರಹೊಳೆ ರಾಷ್ಟಿçÃಯ ಉದ್ಯಾನವನ, ಹುಲಿ ಸಂರಕ್ಷಿತ ಪ್ರದೇಶವಾದ ಮತ್ತಿಗೋಡು ಸಮೀಪದ ಸಾಕಾನೆ ಶಿಬಿರದ ಅನತಿ ದೂರದಲ್ಲಿ ಕಾಡುಕೋಣಕ್ಕೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ ೨೭ ರ ಮಧ್ಯರಾತ್ರಿ ವೇಳೆ ತಿತಿಮತಿ ಸಮೀಪದ ಗಡಿಭಾಗವಾದ ಆನೆ ಚೌಕೂರು ಬಳಿಯ ಅರಣ್ಯ ಪ್ರದೇಶದಲ್ಲಿದ್ದ ಎಂಟು ವರ್ಷ ಪ್ರಾಯದ ಕಾಡುಕೋಣವೊಂದಕ್ಕೆ ಬೇಟೆಗಾರರು ಗುಂಡು ಹಾರಿಸಿದ್ದರು.
ಎದೆಯ ಹಾಗೂ ಕಾಲಿನ ಭಾಗಕ್ಕೆ ಗುಂಡು ತಗುಲಿದ್ದ ಕಾಡುಕೋಣ ಮೈಸೂರು - ತಿತಿಮತಿ ಮಾರ್ಗದ ರಾಜ್ಯ ಹೆದ್ದಾರಿ ಬಳಿಯಲ್ಲಿ ನರಳುತ್ತಾ ಪ್ರಾಣ ಬಿಟ್ಟಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಮೃತಪಟ್ಟ ಕಾಡು ಕೋಣವನ್ನು ನಿಯಮಾನುಸಾರ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಕಾಡುಕೋಣ ಗುಂಡೇಟಿಗೆ ಬಲಿಯಾಗಿರುವುದಾಗಿ ದೃಢಪಟ್ಟಿತ್ತು.
ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ
(ಮೊದಲ ಪುಟದಿಂದ) ಶೋಧ ಕಾರ್ಯ ಕೈಗೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಗೋಣಿಕೊಪ್ಪ ಸಮೀಪದ ಅತ್ತೂರು ಕಾಡಿನಲ್ಲಿ ಅಡಗಿದ್ದ ಆರೋಪಿಗಳಾದ ಅತ್ತೂರು ಗ್ರಾಮದ ಗದ್ದೆ ಮನೆ ಸಮೀಪದ ಅಪ್ಪಯ್ಯ, ಅರುಣ್ ಹಾಗೂ ಮಂಜು ಎಂಬವರುಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿAದ ಕೃತ್ಯಕ್ಕೆ ಬಳಸಿದ್ದ ಬಂದೂಕು, ಓಮಿನಿ ಕಾರು, ಕಾಟ್ರೆಜ್, ಟಾರ್ಚ್ನ್ನು ವಶಕ್ಕೆ ಪಡೆಯಲಾಗಿದೆ.
ಡಿಸಿಎಫ್ ಹರ್ಷ ಹಾಗೂ ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮತ್ತಿಗೋಡು ವನ್ಯಜೀವಿ ವಿಭಾಗದ ಆರ್.ಎಫ್.ಒ ದಿಲಿಪ್, ನಂದನ್ ಕುಮಾರ್, ವಿನೋದ್ ಕುಮಾರ್, ಎಸ್.ಟಿ.ಪಿಎಫ್ ತಂಡದ ಸಿಬ್ಬಂದಿ, ಡಿಆರ್ಎಫ್ಒ ಸಿಬ್ಬಂದಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. - ಹೆಚ್.ಕೆ.ಜಗದೀಶ್ಕಾಡುಕೋಣಕ್ಕೆ ಗುಂಡೇಟು ಪ್ರಕರಣ