ಸುಂಟಿಕೊಪ್ಪ, ಜ. ೬: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಸುರಿದ ಅತಿವೃಷ್ಟಿಯಿಂದ ಬೆಳೆ ನಷ್ಟವಾದ ಬೆಳೆಗಾರರಿಗೆ ಕಂದಾಯ ಇಲಾಖೆಗೆ ಅರ್ಜಿ ನೀಡಿದರೂ ಇನ್ನೂ ಪರಿಹಾರ ಲಭಿಸಲಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸರಕಾರ ಬೆಳೆ ನಷ್ಟವಾದವರಿಗೆ ಪರಿಹಾರದ ಚೆಕ್ ವಿತರಿಸಲಾಗುತ್ತಿದೆ. ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರು ಬೆಳೆ ನಷ್ಟವಾದ ಬಗ್ಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬೇರೆ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರಿಗೆ ನಷ್ಟ ಪರಿಹಾರದ ಮೊತ್ತ ಲಭ್ಯವಾಗಿದೆ. ಸಂಬAಧಪಟ್ಟ ಗ್ರಾಮ ಲೆಕ್ಕಿಗರರನ್ನು ವಿಚಾರಿಸಿದರೆ ಪರಿಹಾರ ಇನ್ನೂ ಬಂದಿಲ್ಲ ಶೀಘ್ರದಲ್ಲೇ ನಿಮಗೂ ಸಿಗುತ್ತದೆ ಎಂಬ ಉತ್ತರ ಹೇಳುತ್ತಾರೆ.

ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಇತ್ತ ಗಮನಹರಿಸಿ ನಮಗೂ ಬೆಳೆ ನಷ್ಟ ಪರಿಹಾರ ದೊರಕಿಸಿಕೊಡಬೇಕೆಂದು ಹರದೂರು ಗ್ರಾಮದ ಬಿ.ಎಂ. ಮನಮೋಹನ, ಬಿ.ಆರ್. ಪೂವಯ್ಯ, ಕೆ.ಕೆ. ಚಂಗಪ್ಪ, ಪಿ.ಸಿ. ಸೋಮಶೇಖರ, ಕೆ.ಕೆ. ಪುಟ್ಟಣ್ಣ ಹಾಗೂ ಜಯರಾಂ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.