ಮಡಿಕೇರಿ, ಜ. ೭: ಕೊಡಗಿನಲ್ಲಿ ಪ್ರಸಿದ್ಧಿ ಹೊಂದಿರುವ ಮ್ಯಾನ್ಸ್ ಕಾಂಪೌAಡ್ ಕ್ಲಬ್ (ಎಂ.ಸಿ.ಸಿ.) ವತಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆತಿದೆ. ಇಲ್ಲಿನ ಮ್ಯಾನ್ಸ್ ಕಾಂಪೌAಡ್ ಬಳಿ ಇರುವ ಫುಟ್ಬಾಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಪಂದ್ಯಾವಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಶ್ಮಯಿ ಚಾಲನೆ ನೀಡಿದರು.

ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ವಿಶ್ಮಯಿ ಅವರು; ೧೯೬೮ರಲ್ಲಿ ಆರಂಭಗೊAಡು ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಎಂ.ಸಿ.ಸಿ. ಕ್ಲಬ್‌ನ ಕಾರ್ಯ ಶ್ಲಾಘನೀಯವಾದುದು, ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಪಂದ್ಯಾವಳಿ ಆಯೋಜನೆ ಮಾಡಲಾಗದಿದ್ದರೂ, ಇದೀಗ ಮತ್ತೆ ಮುಂದುವರಿಸಿರುವದು ಉತ್ತಮ ಕಾರ್ಯವಾಗಿದೆ. ಇಲಾಖಾ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವದು. ಈ ಒಂದು ಪಂದ್ಯಾವಳಿ ಆಯೋಜನೆಗೆ ಕ್ಲಬ್‌ನ ಪದಾಧಿಕಾರಿಗಳು ಸಾಕಷ್ಟು ಶ್ರಮ ವಹಿಸಿದ್ದು, ಪಂದ್ಯಾವಳಿ ಯಶಸ್ಸಾಗಲಿ ಎಂದು ಶುಭ ಹಾರೈಸಿದರು.

ಎಂ.ಸಿ.ಸಿ. ಕ್ಲಬ್‌ನ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕ್ಲಬ್‌ನ ಸದಸ್ಯರುಗಳಿಗೆ ಸಮವಸ್ತçವನ್ನು ಅತಿಥಿಗಳು ವಿತರಣೆ ಮಾಡಿದರು. ಕ್ಲಬ್‌ನ ಅಧ್ಯಕ್ಷ ಕ್ರಿಸ್ಟೋಫರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಸಿ.ಸಿ. ಕ್ಲಬ್‌ನ ಹಿರಿಯ ಆಟಗಾರರುಗಳಾದ ಎನ್.ಕೆ. ರವೀಂದ್ರ, ಕುಟ್ಟಯ್ಯ ವಾಸು, ಸುಜಿತ್ ಚಿಣ್ಣಪ್ಪ, ಕ್ಲಬ್‌ನ ಕಾರ್ಯದರ್ಶಿ ಉಮೇಶ್‌ಕುಮಾರ್, ಖಜಾಂಚಿ ಪೀಟರ್, ಪದಾಧಿಕಾರಿ ಸಚಿನ್ ವಾಸುದೇವ್ ಇದ್ದರು.