ಮಡಿಕೇರಿ ಜ.೬ : ಕೊಡವ ಜನಾಂಗವನ್ನು ರಾಷ್ಟçದ ಇತರ ನಾಗರಿಕರಿಗೆ ಸಮಾನವಾಗಿ ಪರಿಗಣಿಸುವ ಮೂಲಕ ಕೊಡವ ತಾಯ್ನಾಡು ಮತ್ತು ಕೊಡವರ ಭಾವನೆಗಳನ್ನು ಗೌರವಿಸಬೇಕು. ಇದಕ್ಕಾಗಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ರೂಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಕಾರ್ಯವಿಧಾನಕ್ಕೆ ತ್ವರಿತವಾಗಿ ಚಾಲನೆ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಸಂಘಟನೆಯ ಪ್ರಮುಖರು “ಕೊಡವ ಲ್ಯಾಂಡ್” ಪರ ಘೋಷಣೆಗಳನ್ನು ಕೂಗಿದರು.
ಸರ್ಕಾರಗಳು ಅತಿ ಸೂಕ್ಷö್ಮ ಕೊಡವ ಬುಡಕಟ್ಟು ಜನಾಂಗವನ್ನು ಸಮಾನ ನಾಗರಿಕರಂತೆ ಪರಿಗಣಿಸಬೇಕು ಮತ್ತು ತಾಯ್ನಾಡನ್ನು ಇತರ ಭಾಷಾವಾರು ರಾಜ್ಯಗಳಂತೆ ಗೌರವಯುತವಾಗಿ ಕಾಣಬೇಕು. ಆದರೆ ದುಃಖಕರ ವಿಚಾರವೆಂದರೆ ಸರ್ಕಾರಗಳು ಕೊಡವ ಪ್ರದೇಶವನ್ನು ತಮ್ಮ ಸಂಪನ್ಮೂಲ ಉತ್ಪಾದಿಸುವ ಆಕ್ರಮಿತ ಕಾಲೋನಿ ಎಂದು ಪರಿಗಣಿಸುತ್ತಿವೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಸಾಂವಿಧಾನಿಕ ಸಂಸದೀಯ ಸಹಭಾಗಿತ್ವದ ಪ್ರಜಾಪ್ರಭುತ್ವದಲ್ಲಿ ಸಿಎನ್ಸಿ ಸಂಘಟನೆ ಹಾಗೂ ಕೊಡವರು ಯಾವುದೇ ಜಾಗ ಅಥವಾ ಸಮಾನ ಪಾಲು ಕೇಳುತ್ತಿಲ್ಲ. ಬದಲಿಗೆ ಸಂವಿಧಾನದ ೩೨ನೇ ವಿಧಿಯ ಅನುಷ್ಠಾನಕ್ಕೆ ಮನವಿ ಮಾಡಿಕೊಳ್ಳುತ್ತಿದೆ. ಬುಡಕಟ್ಟು ಜನಾಂಗವಾಗಿರುವ ಕೊಡವರ ಹಕ್ಕುಗಳಿಗೆ ಭದ್ರತೆ ನೀಡಲು ಆಡಳಿತವರ್ಗ ಮುಂದಾಗುವ ಮೂಲಕ ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಕಾನೂನುಬದ್ಧ ಆಶೋತ್ತರಗಳು ಮತ್ತು ಗೌರವಾನ್ವಿತ ಗುರಿಗಳನ್ನು ತಿಳಿಸಲು ಸಿಎನ್ಸಿ ನಿರಂತರ ಧರಣಿಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಧರಣಿ ನಿರತರು ಸಿಎನ್ಸಿಯ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರಿಗೆ ಸಲ್ಲಿಸಿದರು. ಸಿಎನ್ಸಿ ಮಹಿಳಾ ಸ್ವಯಂ ಸೇವಕರಾದ ಪಟ್ಟಮಾಡ ಲಲಿತಾ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಕೂಪದಿರ ಪುಷ್ಪ ಮುತ್ತಪ್ಪ, ಪುರುಷ ಸ್ವಯಂ ಸೇವಕರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಪಟ್ಟಮಾಡ ಕುಶ, ಚೆಂಬAಡ ಜನತ್, ಮಂದಪAಡ ಮನೋಜ್, ಕಾಟುಮಣಿಯಂಡ ಉಮೇಶ್, ಅಪ್ಪಾರಂಡ ಪ್ರಸಾದ್, ಮೇದುರ ಕಂಠಿ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ನಂದಿನೆರವAಡ ವಿಜು, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಕೂಪದಿರ ಸಾಬು, ಮಂದಪAಡ ಸೂರಜ್, ಮಣವಟ್ಟಿರ ಶಿವಣಿ, ಕುಲ್ಲೇಟಿರ ಅರುಣ ಬೇಬ, ಬಡುವಂಡ ವಿಜಯ, ಮಣವಟ್ಟಿರ ಜಗದೀಶ್, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಪಟ್ಟಮಾಡ ಪ್ರಕಾಶ್ ಹಾಗೂ ಪಟ್ಟಮಾಡ ಅಶೋಕ್ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಕೇAದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜು, ಅರ್ಥಶಾಸ್ತçಜ್ಞ ಮತ್ತು ಕೇಂದ್ರದ ಮಾಜಿ ಕಾನೂನು ಮಂತ್ರಿ ಡಾ. ಸುಬ್ರಮಣ್ಯನ್ ಸ್ವಾಮಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಚಪ್ಪ ಅವರು ಜಿಲ್ಲಾಡಳಿತದ ಮೂಲಕ ಮನವಿ ಪತ್ರ ಸಲ್ಲಿಸಿದರು.