ಕೊಡ್ಲಿಪೇಟೆ, ಜ. ೭: ಎಸ್ಕೆಎಸ್ಎಸ್ಎಫ್ ಮತ್ತು ಎಸ್ವೈಎಸ್ ಶಾಖೆಯ ವತಿಯಿಂದ ಮಜ್ಲಿಸುನ್ನೂರ್ನ ೯ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ತಾ. ೮ರಂದು (ಇಂದು) ಸಂಜೆ ೬ ಗಂಟೆಗೆ ಹ್ಯಾಂಡ್ಪೋಸ್ಟ್ ಮಜೀದಿ ಸಮೀಪದ ಜಿಎಂಎ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಎಸ್ಕೆಎಸ್ಎಸ್ಎಫ್ ಶಾಖೆಯ ಅಧ್ಯಕ್ಷ ಬಾಸಿತ್ ತಿಳಿಸಿದ್ದಾರೆ.
ಕಾರ್ಯಕ್ರಮದ ನೇತೃತ್ವವನ್ನು ಕೇರಳದ ಸಯ್ಯದ್ ಝೈನುಲ್ ಅಬಿದಿನ್ ವಹಿಸಲಿದ್ದು, ಹ್ಯಾಂಡ್ಪೋಸ್ಟ್ ಮಸ್ಜಿದ್ ಧರ್ಮಗುರು ಹಾರಿಸ್ ಬಾಖವಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು ಅವರು ತಿಳಿಸಿದ್ದಾರೆ.