ಮಡಿಕೇರಿ, ಜ. ೫: ರೋಟರಿ ಮಡಿಕೇರಿ ವುಡ್ಸ್ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಆರಂಭಿಕ ವರ್ಷವೇ ಸಾಧನೆಯ ಹೆಗ್ಗುರುತುಗಳನ್ನು ಸೃಷ್ಟಿಸಿದೆ ಎಂದು ರೋಟರಿ ವುಡ್ಸ್ನ ೩೧೮೧ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾಗಿ ೨೦೨೨ರ ಮೇ ೧೫ ರಂದು ಉದಯಿಸಿದ ರೋಟರಿ ಮಡಿಕೇರಿ ವುಡ್ಸ್ ೩೫ ಸದಸ್ಯರನ್ನೊಳಗೊಂಡು ಸಾಕಷ್ಟು ಜನೋಪಯೋಗಿ ಕಾರ್ಯ ಯೋಜನೆಗಳ ಮೂಲಕ ಜನಸ್ನೇಹಿ ಯಾಗಿದೆ. ಮುಂದಿನ ವರ್ಷ ಗಳಲ್ಲಿಯೂ ಮತ್ತಷ್ಟು ಸಾಮಾಜಿಕ ಕಳಕಳಿಯ ಯೋಜನೆಗಳಲ್ಲಿ ಸಕ್ರಿಯವಾಗಲಿದೆ ಎಂದರು.

ರೋಟರಿ ವುಡ್ಸ್ ಸಂಸ್ಥೆ ಶುದ್ಧ ಕುಡಿಯುವ ನೀರು, ಜನರಿಗೆ ಸೂರು, ಶಿಕ್ಷಣ, ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ರೋಟರಿ ಇಂಟರ್‌ನ್ಯಾಷನಲ್‌ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ಜೆನಿಫರ್ ಜೋನ್ಸ್ ಅವರ ಆಶಯದಂತೆ ಶಿಕ್ಷಣ ಮತ್ತು ಪರಿಸರಕ್ಕೆ ಪೂರಕವಾದ ವನಸಿರಿ, ವಿದ್ಯಾಸಿರಿ, ಆರೋಗ್ಯ ಸಿರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಲಬ್ ಸರ್ವಿಸ್, ಜನರನ್ನು ಬಲಪಡಿಸುವ ನಿಟ್ಟಿನಲ್ಲಿ ಕಮ್ಯೂನಿಟಿ ಸರ್ವಿಸ್, ಯುವಕರನ್ನು ಬಲಪಡಿಸುವ ನಿಟ್ಟಿನಲ್ಲಿ ಯೂತ್ ಸರ್ವಿಸ್, ರಾಷ್ಟçವನ್ನು ಜಾಗೃತಿ ಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟಿçÃಯ ಸೇವೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿಶ್ವÀದಾದ್ಯಂತ ಪೋಲಿಯೋ ಹೊಡೆದೋಡಿಸುವಲ್ಲಿ ಯಶಸ್ವಿಯನ್ನು ಕಂಡಿದ್ದು, ರೋಟರಿ ದತ್ತಿನಿಧಿಯ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ತಾ. ೨೭, ೨೮ ಹಾಗೂ ೨೯ ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಕಾನ್ಫರೆನ್ಸ್ ಕಾರ್ಯಕ್ರಮ ನಡೆಯಲಿದ್ದು, ಸುಮಾರು ೨ ಸಾವಿರ ಕುಟುಂಬಗಳು ಭಾಗವಹಿಸಲಿವೆ. ಅಲ್ಲದೆ ಬೈಕ್‌ರೈರ‍್ಸ್ ಮೂಲಕ ಮಣ್ಣು, ಜಲದ ಬಗ್ಗೆ ಜಾಗೃತಿ ಮೂಡಿಸಲಾ ಗುವುದು ಎಂದು ತಿಳಿಸಿದರು.

ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಬೊಯಿಕೇರಿ ಶಾಲೆಯ ಮಕ್ಕಳಿಗೆ ಸಮವಸ್ತç ವಿತರಣೆ, ಬಾಳೆಲೆಯಲ್ಲಿ ವೈದ್ಯಕೀಯ ಶಿಬಿರ, ಜಂಬೂರುವಿನಲ್ಲಿ ಮುನ್ನೂರು ಮಂದಿಗೆ ರಾಷ್ಟç ಧ್ವಜ ನೀಡುವ ಮೂಲಕ ಸಂಭ್ರಮದ ಸ್ವಾತಂತ್ರö್ಯ ದಿನಾಚರಣೆ, ಕ್ಲಬ್ ಸದಸ್ಯರೂ ಸೇರಿದಂತೆ ಅನೇಕ ರೋಟರಿ ಸದಸ್ಯರಿಂದ ವಾರದ ಸಭೆಗಳಲ್ಲಿ ಮಾಹಿತಿಯುಕ್ತ ಉಪನ್ಯಾಸ ಕಾರ್ಯಕ್ರಮ ಆಯೋಜನೆ, ಮೂರ್ನಾಡು ಶಿಕ್ಷಣ ಸಂಸ್ಥೆಯಲ್ಲಿ ಸಸಿ ನೆಡುವಿಕೆ, ದಂತ ತಪಾಸಣ ಶಿಬಿರ, ರಕ್ತದಾನ ಶಿಬಿರ, ಮಡಿಕೇರಿ ಹೊರವಲಯದಲ್ಲಿ ಸ್ವಾಗತ ಫಲಕ ಅಳವಡಿಕೆ, ಪಲ್ಸ್ ಪೊಲಿಯೋ ನಿವಾರಣೆಯ ಮಹತ್ವ ಸಾರುವ ಫ್ಲೆಕ್ಸ್ ಅಳವಡಿಕೆ ಸೇರಿದಂತೆ ಹಲವು ಯೋಜನೆಯನ್ನು ಜಾರಿಗೊಳಿಸ ಲಾಗಿದೆ. ೨೮ ವಾರಗಳಲ್ಲಿ ೩೨ ಪ್ರಮುಖ ಯೋಜನೆ ಕೈಗೊಂಡಿರು ವುದು ವುಡ್ಸ್ನ ಸಾಧನೆಯಾಗದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಯೋಜನೆಗಳಲ್ಲಿ ಸಕ್ರಿಯವಾಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ ೬ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ ಹಾಗೂ ಮಡಿಕೇರಿ ರೋಟರಿ ವುಡ್ಸ್ ಕಾರ್ಯದರ್ಶಿ ವಸಂತ ಕುಮಾರ್ ಉಪಸ್ಥಿತರಿದ್ದರು.