ವೀರಾಜಪೇಟೆ, ಜ. ೫: ನಗರದ ಅಪ್ಪಯ್ಯಸ್ವಾಮಿ ರಸ್ತೆಯ ಶ್ರೀ ಮಹಾಗಣಪತಿ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಕೊಡಗು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಷನ್ ವತಿಯಿಂದ ಮಹಿಳೆಯರಿಗಾಗಿ ಸೌಂದರ್ಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಲಿಟಲ್ ಸ್ಕೌಲರ್ಸ್ ಅಕಾಡೆಮಿ ಅಧ್ಯಕ್ಷೆ ಪೂಜಾ ಸಜೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಮ್ಮ ಜೀವನ ಸದುಪಯೋಗಪಡಿಸಿಕೊಳ್ಳಬೇಕಾದರೆ ಸಾಧನೆಯ ದಾರಿ ಹಿಡಿಯಬೇಕು. ಕಳೆದ ವರ್ಷ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯವಲ್ಲ. ಈ ವರ್ಷ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ಸೌಂದರ್ಯ ಎಂಬುದು ಹೆಣ್ಣು ಮಕ್ಕಳಿಗೆ ಮುಖ್ಯವಾಗಿದೆ. ಇದಕ್ಕಾಗಿ ಹಲವು ಬಗೆಯ ಸೌಂದರ್ಯಕ್ಕೆ ಸಂಬAಧಿಸಿದ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ಯಾವ ರೀತಿ ಉಪಯೋಗ ಮಾಡಬೇಕು ಎಂಬುದನ್ನು ಕಲಿಯಬೇಕು. ಈ ಮೇಕಪ್ ತರಬೇತಿ ಶಿಬಿರವನ್ನು ಪ್ರತಿಯೊಬ್ಬ ಮಹಿಳೆಯರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ ಬಾಬಾ ಶಂಕರ್ ಮಾತನಾಡಿ, ಮಹಿಳೆಯರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ. ಅದರಲ್ಲಿ ಬಟ್ಟೆ ಹೊಲಿಗೆ, ಕೃಷಿ ಸೇರಿದಂತೆ ಅನೇಕ ಯೋಜನೆಗಳನ್ನು ತಂದಿದೆ. ಇದರಿಂದ ಆನೇಕ ಮಹಿಳೆಯರಿಗೆ ತಮ್ಮ ಜೀವನ ಸಾಗಿಸಲು ಅನುಕೂಲವಾಗಿದೆ. ಈ ಮಾದರಿಯ ತರಬೇತಿ ಶಿಬಿರ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು. ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶಿಭಾ ಪೃಥ್ವಿನಾಥ್ ಮಾತನಾಡಿ, ಸಂಘದ ವತಿಯಿಂದ ಮಹಿಳೆಯರಿಗಾಗಿ ವಾಹನ ಚಾಲನೆ, ಬಟ್ಟೆ ಹೊಲಿಗೆ ತರಬೇತಿ ಸೇರಿದಂತೆ ಅನೇಕ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಸೌಂದರ್ಯ ತರಬೇತಿ ಶಿಬಿರ ಎರಡು ತಿಂಗಳು ಉಚಿತವಾಗಿ ನಡೆಸಲಾಗುತ್ತದೆ. ತಿಂಗಳಿಗೆ ಎರಡು ದಿನ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭ ವೀರಾಜಪೇಟೆ ಪುರಸಭೆ ಸದಸ್ಯ ಸಿ.ಕೆ. ಪೃಥ್ವಿನಾಥ್, ಮಹಿಳಾ ಸಂಘದ ಕಾರ್ಯದರ್ಶಿ ಪುಷ್ಪಲತಾ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.