ಸೋಮವಾರಪೇಟೆ, ಜ.೫ : ಇಲ್ಲಿನ ಕೊಡವ ಸಮಾಜದ ವತಿಯಿಂದ ತಾ.೧೫ರಂದು ಬೆಳಿಗ್ಗೆ ೧೦-೩೦ಕ್ಕೆ ಪುತ್ತರಿ ಊರೊರ್ಮೆ ಕಾರ್ಯಕ್ರಮವನ್ನು ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ವಿದ್ಯುತ್ ಪರಿವೀಕ್ಷಣಾಧಿಕಾರಿ ತೀತಿರ ರೋಷನ್ ಅಪ್ಪಚ್ಚು, ಕಾಫಿ ಬೆಳೆಗಾರರಾದ ಅನಿಲ್ ಪೊನ್ನಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರನ್ನು ಸನ್ಮಾನಿಸಲಾಗು ವುದು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಟಿಸಿಎಚ್, ಡಿಪ್ಲೊಮಾ, ಪದವಿ, ಸ್ನಾತಕ್ಕೋತ್ತರ ಶಿಕ್ಷಣದಲ್ಲಿ ಶೇ. ೬೫ಕ್ಕಿಂತಲೂ ಅಂಕ ಗಳಿಸಿದ ಸಮಾಜದ ಸದಸ್ಯರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಗುವುದು. ರಾಷ್ಟಿçÃಯ, ಮತ್ತು ಅಂತರರಾಷ್ಟಿçÃಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ಕ್ರೀಡಾ ಸಾಧನೆಯ ಪ್ರಮಾಣ ಪತ್ರದ ನಕಲು ಪತ್ರವನ್ನು ತಾ.೧೩ರ ಒಳಗೆ ಕಚೇರಿಗೆ ತಲುಪಿಸಬೇಕು.

ಗರ್ವಾಲೆ ಬೊಟ್ಲಪ್ಪ ತಂಡದಿAದ ಬೊಳಕಾಟ್, ಕೋಲಾಟ್, ಮೂವತ್ತೊಕ್ಲು ಮೌಂಟ್ ವ್ಯಾಲಿಡ್ಯೂ ತಂಡದಿAದ ಉಮ್ಮತ್ತಾಟ್ ಹಾಗೂ ಸದಸ್ಯರು ಮತ್ತು ಅವರ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಅಭಿಮನ್ಯುಕುಮಾರ್ ತಿಳಿಸಿದ್ದಾರೆ.