ಕೂಡಿಗೆ, ಜ. ೫: ಮಡಿಕೇರಿಯ ಎಫ್‌ಎಂಕೆಎAಸಿ, ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಹಾಗೂ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಅನುಚರರಾಗಿ ಸುಮಾರು ೩೩ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ ಡಿ.ಸಿ. ವಸಂತ್ ಅವರಿಗೆ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭ ಕೇಂದ್ರದ ಪ್ರಬಾರ ನಿರ್ದೇಶಕ ಡಾ. ಕೆ.ಕೆ. ಧರ್ಮಪ್ಪ, ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಶಾಮಸುಂದರ ಜೆ., ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಬಿ.ಎಸ್. ಗುಣಶ್ರೀ, ಸಹಾಯಕ ಪ್ರಾಧ್ಯಾಪಕಿ ಡಾ. ಐ.ಕೆ. ಮಂಜುಳಾ, ಪ್ರಯೋಗಾಲಯ ಸಹಾಯಕ ಗಂಗರಾಜ್, ಸಹಾಯಕ ಗ್ರಂಥಪಾಲಕ ಕೆ.ಜೆ. ಹರೀಶ್ ಮೊದ ಲಾದವರು ಹಾಜರಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವರ್ಗ, ತಾಂತ್ರಿಕ ವರ್ಗ, ಸ್ವಚ್ಛತಾ ವರ್ಗ, ಭದ್ರತಾ ಸಿಬ್ಬಂದಿ ಉಪಸ್ಥಿತರಿದ್ದರು.