ಮಡಿಕೇರಿ, ಜ. ೫: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ ಸಂಬAಧಿಸಿದAತೆ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ. ಈ ಕುರಿತಾದ ಕರಡು ಪ್ರತಿಯನ್ನು ಜನವರಿ ೨ ರಂದು ಪ್ರಕಟಿಸಲಾಗಿದ್ದು, ಒಟ್ಟು ಸದಸ್ಯರುಗಳ ಸಂಖ್ಯೆ ಹಾಗೂ ಜಿ.ಪಂ.-ತಾ.ಪA.ನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ನಿಗದಿಪಡಿಸಲಾಗಿದೆ.
ಈ ಕ್ಷೇತ್ರಗಳಿಗೆ ಒಳಪಡುವ ಗ್ರಾಮಗಳನ್ನು ಒಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕÀ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿ ಮಾಡಲಾಗಿದೆ.
ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂತನವಾಗಿ ಹೊಸ ತಾಲೂಕುಗಳು ರಚನೆಗೊಂಡಿರುವ ಹಿನ್ನೆಲೆಯಲ್ಲಿ ಜಿ.ಪಂ.-ತಾ.ಪA. ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗುತ್ತಿದೆ. ಇದೀಗ ಸೀಮಾ ನಿರ್ಣಯ ಆಯೋಗವು ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಮಾಡಲಾಗಿರುವ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ.
ಈ ಹಿಂದೆ ಕೊಡಗಿನಲ್ಲಿ ಇದ್ದ ಮೂರು ತಾಲೂಕುಗಳಾದ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆಯೊಂದಿಗೆ ಹೊಸದಾಗಿ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳು ಸೇರ್ಪಡೆಗೊಂಡಿದ್ದು, ಒಟ್ಟು ೫ ತಾಲೂಕುಗಳನ್ನು ಒಳಗೊಂಡಿದೆ. ಪ್ರತಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳು ಆಯಾ ತಾಲೂಕಿಗೆ ಸಂಬAಧಪಟ್ಟ ಗ್ರಾಮಗಳ ವ್ಯಾಪ್ತಿಯನ್ನೇ ಒಳಗೊಂಡಿರಬೇಕು ಎಂಬ ತೀರ್ಮಾನದಂತೆ ಇದೀಗ ಈ ಕ್ಷೇತ್ರಗಳನ್ನು ಗುರುತು ಮಾಡಲಾಗಿದ್ದು, ಗ್ರಾಮಗಳ ವ್ಯಾಪ್ತಿಯನ್ನು ಸೇರಿಸಲಾಗಿದೆ.
ಜನವರಿ ೨ ರಂದು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಹೊಸ ಬದಲಾವಣೆಯನ್ನು ಪ್ರಕಟಿಸಿದೆ. ಇದರಂತೆ ನಮೂದಿಸಲಾಗಿರುವ ಗ್ರಾಮಗಳನ್ನು ಒಳಗೊಂಡ ಪ್ರದೇಶಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬAಧಿಸಿದAತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿAದ ೧೫ ದಿವಸಗಳ ಒಳಗಾಗಿ ಅಂದರೆ ಜನವರಿ ೧೬ರ ಸಂಜೆ ೫ ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದ್ದು, ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂಠಿತವಾಗಲಿರುವ ಜಿ.ಪಂ. ಕ್ಷೇತ್ರ
ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಸ್ತುತ ಹೊರಡಿಸಿರುವ ಪ್ರಕಟಣೆಯಂತೆ ಕೊಡಗಿನಲ್ಲಿ ಈ ಹಿಂದೆ ಇದ್ದಂತಹ ಜಿ.ಪಂ. ಕ್ಷೇತ್ರಗಳ ಸಂಖ್ಯೆಯಲ್ಲಿ ಮತ್ತೆ ಇಳಿಮುಖವಾಗಲಿದೆ. ಈ ಹಿಂದೆ ಜಿಲ್ಲೆ ಒಟ್ಟು ೨೯ ಜಿ.ಪಂ. ಕ್ಷೇತ್ರಗಳನ್ನು ಹೊಂದಿತ್ತು. ಇದೀಗ ಈ ಸಂಖ್ಯೆ ೨೫ಕ್ಕೆ ಸೀಮಿತಗೊಂಡಿದ್ದು, ಒಟ್ಟು ನಾಲ್ಕು ಸದಸ್ಯ ಸ್ಥಾನ ಕುಂಠಿತವಾಗಲಿದೆ.
ಹೊಸದಾಗಿ ಗುರುತು ಮಾಡಲಾಗಿರುವಂತೆ ವೀರಾಜಪೇಟೆ ತಾಲೂಕಿಗೆ ೪, ಕುಶಾಲನಗರ ೫, ಸೋಮವಾರಪೇಟೆ ೫, ಪೊನ್ನಂಪೇಟೆ ೫ ಹಾಗೂ ಮಡಿಕೇರಿ ತಾಲೂಕಿಗೆ ೬ ಸ್ಥಾನ ಸೇರಿದಂತೆ ಒಟ್ಟು ೨೫ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಆದರೆ ಒಟ್ಟಾರೆಯಾಗಿ ಈ ಹಿಂದೆ ಇದ್ದ ೨೯ ಸದಸ್ಯ ಸ್ಥಾನದ ಪೈಕಿ ೪ ಸ್ಥಾನಗಳು ಕಣ್ಮರೆಯಾಗಲಿದೆ.
(ಮೊದಲ ಪುಟದಿಂದ) ತಾ.ಪಂ. ಕ್ಷೇತ್ರಗಳು ಈ ಹಿಂದೆ ಒಟ್ಟು ೪೯ ಇದ್ದಿದ್ದು, ಇದೀಗ ೫೦ ಆಗಲಿವೆಯಾದರೂ ಹೆಚ್ಚು ಮಹತ್ವವಿರುವುದು ಜಿ.ಪಂ. ವ್ಯಾಪ್ತಿಯ ಕ್ಷೇತ್ರಗಳಿಗೆ ಮಾತ್ರ ಎಂಬುದು ಗಮನಾರ್ಹವಾದದ್ದು.
ಕೊಡಗು ಜಿಲ್ಲೆ ಈ ಹಿಂದೆ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ನಂತರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಸಂದರ್ಭ ಜನಸಂಖ್ಯೆ ಆಧಾರದಲ್ಲಿ ೨ ಕ್ಷೇತ್ರಕ್ಕೆ ಸೀಮಿತಗೊಂಡಿತ್ತು. ಇದೀಗ ೨೯ ರಷ್ಟಿದ್ದ ಜಿ.ಪಂ. ಕ್ಷೇತ್ರಗಳು ೨೫ಕ್ಕೆ ಇಳಿಕೆಯಾಗುತ್ತಿರುವ ಬಗ್ಗೆ ಅಸಮಾಧಾನಗಳು ವ್ಯಕ್ತಗೊಳ್ಳುತ್ತಿವೆ.