ಕುಶಾಲನಗರ, ಜ. ೫: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ. ೩ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಕವಿಗಳಿಂದ ಮಾತ್ರ ಕವನಗಳನ್ನು ಆಹ್ವಾನಿಸಲಾಗಿದ್ದು, ಕವಿಗೋಷ್ಢಿಯಲ್ಲಿ ಯುವ ಉದಯೋನ್ಮುಖ ಹಾಗೂ ಹೊಸ ಪ್ರತಿಭೆ ಮತ್ತು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕವಿಗೋಷ್ಠಿಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ವ ರಚಿತ ಕವಿತೆಗಳು ೧೫ ರಿಂದ ೨೦ ಸಾಲುಗಳ ಮಿತಿಯಲ್ಲಿದ್ದು, ಕವನ ವಾಚನಕ್ಕೆ ಮೂರು ನಿಮಿಷಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಆಸಕ್ತ ಕವಿಗಳು ತಮ್ಮ ಸ್ವ ರಚಿತ ಕವನದ ಮೂಲ ಪ್ರತಿಯನ್ನು ಜನವರಿ ೧೨ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ : ಅಧ್ಯಕ್ಷರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚಂದ್ರ ಶ್ರೀ ಕಾಂಪ್ಲೆಕ್ಸ್, ಸೋಮೇಶ್ವರ ದೇವಸ್ಥಾನದ ಎದುರು, ಕೂಡಿಗೆ ರಸ್ತೆ, ಕುಶಾಲನಗರ.
ಕವಿಗೋಷ್ಠಿಗೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಸಂಪರ್ಕ ಸಂಖ್ಯೆಗಳು: ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕರು, ಮೊ. ಸಂ: ೯೪೪೯೨೮೪೩೬೫, ಟಿ.ಬಿ. ಮಂಜುನಾಥ್, ಶಿಕ್ಷಕರು, ಮೊ.ಸಂ: ೯೯೧೬೬೫೨೩೩೭, ಬಿ.ಬಿ.ಹೇಮಲತಾ, ಶಿಕ್ಷಕಿ, ಮೊ: ೯೦೦೮೭೩೭೩೧೪.
ಕವನಗಳನ್ನು ವಾಟ್ಸಪ್ ಮೂಲಕ ತಾ. ೧೨ ರ ಒಳಗಾಗಿ ಮೊಬೈಲ್ ಸಂಖ್ಯೆಗೆ ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ತಾ.೧೨ ರ ನಂತರ ಬರುವ ಕವನಗಳನ್ನು ಕವಿಗೋಷ್ಠಿಗೆ ಪರಿಗಣಿಸಲಾಗುವುದಿಲ್ಲ.