ಗೋಣಿಕೊಪ್ಪಲು, ಜ. ೪: ದ.ಕೊಡಗಿನ ಬೆಸಗೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿಯ ಸಂಚಾರವಿರುವ ಬಗ್ಗೆ ಸಾರ್ವಜನಿಕವಾಗಿ ವದಂತಿಗಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆ ವಹಿಸುವಂತೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ದ. ಕೊಡಗಿನಲ್ಲಿ ಆಗಿಂದಾಗ್ಗೆ ಹುಲಿಗಳ ಸಂಚಾರವಾಗುತ್ತಿದ್ದು, ಸಹಜವಾಗಿಯೇ ಗ್ರಾಮದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತೋಟದಲ್ಲಿ ಕಾಫಿ ಹಣ್ಣು ಕುಯ್ಯುವ ಸಮಯವಾದ್ದರಿಂದ ಕಾರ್ಮಿಕರು ತೋಟಕ್ಕೆ ತೆರಳಬೇಕಾಗಿದೆ. ಇದೀಗ ಹುಲಿಯೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಯದ ವಾತಾವರಣ ಕಂಡುಬAದಿದೆ.

ಮುAಜಾಗ್ರತಾ ಕ್ರಮವಾಗಿ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಗೂರು ಚೀನಿವಾಡ ಬಳಿಯ ಕಾಫಿ ತೋಟದಲ್ಲಿ ಹುಲಿ ಚಲನವಲನಗಳನ್ನು ಗಮನಿಸಲು ಐದು ಕ್ಯಾಮರಾಗಳನ್ನು ಅಳವಡಿಸಿದ್ದಾರೆೆ.

ಕ್ಯಾಮರಾದಲ್ಲಿ ಹುಲಿಯ ಸುಳಿವು ದೊರೆತಲ್ಲಿ ಹುಲಿಯ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

- ಹೆಚ್.ಕೆ.ಜಗದೀಶ್