ಭಾಗಮಂಡಲ, ಜ. ೪: ವಿಶೇಷ ಚೇತನರ ಬಗ್ಗೆ ಕೇವಲ ಕುಟುಂಬಸ್ಥರು ಮಾತ್ರ ಕಾಳಜಿ ವಹಿಸಿದರೆ ಸಾಲದು. ಸಮಾಜವು ಕೂಡ ಕಾಳಜಿ ವಹಿಸಿದರೆ ವಿಶೇಷಚೇತನರು ಮಾನಸಿಕವಾಗಿ ಗಟ್ಟಿಯಾಗುತ್ತಾರೆ ಎಂದು ಶಾಸಕ ಕೆ. ಜಿ ಬೋಪಯ್ಯ ಹೇಳಿದರು.

ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಕೊಡಗು ವೈದ್ಯಕೀಯ ಸಂಸ್ಥೆ, ಭಾಗಮಂಡಲ ಗ್ರಾಮ ಪಂಚಾಯಿತಿ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನರು ಕುಟುಂಬಕ್ಕೆ ಹೊರೆ ಆಗದಂತೆ ಬದುಕಲು ಸರ್ಕಾರದ ಸೌಲಭ್ಯ ಹಾಗೂ ಮಾಸಿಕ ವೇತನ ನೀಡುವುದರೊಂದಿಗೆ ಅರ್ಹರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ ಆರೋಗ್ಯಕ್ಕೆ ಸಂಬAಧಿಸಿದAತೆ ಹಲವು ಯೋಜನೆಗಳಿದ್ದು ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ವಿಶೇಷ ಯೋಜನೆಗಳು ತಲುಪಬೇಕು. ಈ ನಿಟ್ಟಿನಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು, ಸುಮಾರು ೯೧ ಮಂದಿ ಕಾರ್ಡ್ ಪಡೆದಿದ್ದಾರೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಮಿತಾ ವಹಿಸಿದ್ದರು. ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ್, ವೈದ್ಯಕೀಯ ತಜ್ಞರಾದ ನಂಜುAಡ, ಪಿಡಿಓ ನಂದ ಉಪಸ್ಥಿತರಿದ್ದರು.