ಶ್ರೀಮಂಗಲ, ಜ. ೪: ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾಮದ ಕಾಳಿ ಮಾತೆಯ ಕರಿಂಗಾಳಿ ದೇವಸ್ಥಾನದ ಧಾರ್ಮಿಕ ಆಚರಣೆಗಳು ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಇದರಿಂದ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ. ಸರ್ವೆ ನಂ ೫೯/೫ರಲ್ಲಿ ೧೯.೪೬ ಎಕರೆ ಸರ್ಕಾರಿ ಜಾಗದಲ್ಲಿ ದೇವಸ್ಥಾನವಿದ್ದು ಅಪಾರ ಭಕ್ತಾದಿಗಳನ್ನು ಹೊಂದಿದ್ದು ಪರಂಪರೆಯಾಗಿ ನಡೆಸಿಕೊಂಡು ಬರುತ್ತಿರುವವರು ಸರಿಯಾಗಿ ನಡೆಸದೆ ಇರುವುದರಿಂದ ಗ್ರಾಮಕ್ಕೆ ಕಷ್ಟ-ನಷ್ಟಗಳು ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಈ ಸಮಸ್ಯೆಯನ್ನು ಕ್ರಮಬದ್ಧವಾಗಿ ಹಾಗೂ ಜವಬ್ದಾರಿಯುತವಾಗಿ ನಡೆಸಲು ಸೂಕ್ತ ಕ್ರಮಕೈಗೊಳ್ಳಲು ಗ್ರಾಮಸ್ಥರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಟ್ಟ ಪ್ರಾ.ಕೃ.ಪ.ಸ.ಸಂಘದ ಸಭಾಂಗಣದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ತಾ ೧೪.೧೨.೨೦೨೨ ರಂದು ಕುಟ್ಟ, ತೈಲಾ, ಮಂಚಳ್ಳಿ ಗ್ರಾಮಸ್ಥರು ಸಭೆ ನಡೆಸಿ ಈ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಯ ಮೇಲುಸ್ತುವಾರಿಯನ್ನು ನಡೆಸುತ್ತಿರುವ ಪ್ರಮುಖರನ್ನು ಪೊಲೀಸ್ ಇಲಾಖೆ ಮತ್ತು ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು ಒಳಗೊಂಡAತೆ ಸಭೆ ಕರೆಯಲಾಗಿದ್ದು, ಈ ಸಭೆಗೆ ದೇವಸ್ಥಾನ ಮೇಲುಸ್ತುವಾರಿ ಹೊಂದಿರುವ ವ್ಯಕ್ತಿ ಒಬ್ಬರು ಬರಲಿಲ್ಲ. ಅವರ ಮನೆಗೆ ಹೋಗಿ ಕರೆದರೂ ಸಹ ಹಾರಿಕೆಯ ಉತ್ತರ ನೀಡಿದ್ದಾರೆ.
ಸಭೆಯಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾ.ಪಂ. ಅಧ್ಯಕ್ಷ ಪ್ರತೀಶ್ ಗಣಪತಿ ಜನತೆಯ ಒತ್ತಡದಿಂದ ಕರೆ ಮಾಡಿದಾಗ ನಾನು ಬರುವುದಿಲ್ಲ, ನೀವು ಯಾರನ್ನು ಕೇಳಿ ನನ್ನ ದೇವಸ್ಥಾನಕ್ಕೆ ಬಂದಿರುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದ್ದರಿಂದ ಗ್ರಾಮಸ್ಥರಿಗೆ ಹಾಗೂ ಭಕ್ತಾದಿಗಳಿಗೆ ತುಂಬಾ ನೋವಾಗಿದೆ. ಆದ್ದರಿಂದ ಸಂಬAಧಿಸಿದ ದೇವಸ್ಥಾನದ ಮೇಲುಸ್ತುವಾರಿ ನಡೆಸುತ್ತಿರುವ ಆಶೋಕ ಅವರು ದೇವಸ್ಥಾನ ತಮ್ಮ ಸ್ವಂತದ್ದು ಎಂಬ ರೀತಿಯಲ್ಲಿ ವರ್ತಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ದೇವಸ್ಥಾನ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಮಂಚಳ್ಳಿ, ಕುಟ್ಟ, ತೈಲಾ ಗ್ರಾಮಕ್ಕೆ ಒಳಪಟ್ಟಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ದೇವರ ಉತ್ಸವದ ಕಟ್ಟು ಹಾಕಿದ ಮೇಲೆ ಮೂರು ಗ್ರಾಮದವರು ಯಾವುದೇ ಶುಭಕಾರ್ಯ ನಡೆಸುವುದಿಲ್ಲ. ಯಾರಾದರೂ ಮರಣ ಹೊಂದಿದ್ದರೆ ದೀಕ್ಷೆ ತೆಗೆಯದೆ ಉತ್ಸವದ ನಂತರ ತಿಥಿ ಕಾರ್ಯ ಮಾಡುವುದು ನಡೆದು ಬಂದಿದೆ. ಸಾಂಪ್ರದಾಯಿಕ ವಾಲಗ ಕೂಡ ನುಡಿಸುವುದಿಲ್ಲ ಎಂದು ದೇವಸ್ಥಾನದ ಧಾರ್ಮಿಕ ಆಚರಣೆ ಗ್ರಾಮಕ್ಕೆ ಸಂಬAಧಿಸಿದೆ ಎಂಬ ಬಗ್ಗೆ ವಿವರಿಸಿದರು.
ಕರಿಂಗಾಳಿ ದೇವಿಯ ಪೂಜೆ ಮತ್ತು ಉತ್ಸವ ಶಾಸ್ತç ಪ್ರಕಾರ ನಡೆಯುತ್ತಿಲ್ಲ. ಅದರಿಂದ ತಂತ್ರಿಗಳನ್ನು ಕರೆಸಿ ಹೂ ಪ್ರಶ್ನೆ ಹಾಕಿ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತçಬದ್ಧವಾಗಿ ಬಂದ ತೀರ್ಮಾನದಂತೆ ಮುಂದೆ ಪೂಜೆ ಬೊಳ್ಳಾಟ ಮತ್ತು ಉತ್ಸವ ನಡೆಯುವಂತೆ ತೀರ್ಮಾಸಬೇಕು. ದೇವಸ್ಥಾನದ ಪೂಜೆ ಮತ್ತು ಉತ್ಸವವನ್ನು ಹಿಂದಿನAತೆ ಈಗ ಇರುವ ಅಶೋಕ್ ಹಾಗೂ ಇದಕ್ಕೆ ಸಂಬAಧಿಸಿದ ಕುಟುಂಬದವರು ಮೇಲುಸ್ತುವಾರಿಯಲ್ಲಿ ನಡೆಸಬೇಕು ಇದು ತಲೆ ತಲಾಂತರದಿAದ ನಡೆದು ಬಂದ ಪದ್ಧತಿ ಆಗಿರುತ್ತದೆ. ಅದು ಮುಂದೆಯೂ ನಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ದೇವಸ್ಥಾನದ ಮೇಲುಸ್ತುವಾರಿಗೆ ಪ್ರತಿ ಗ್ರಾಮದಿಂದ ತಲಾ ನಾಲ್ಕು ಗ್ರಾಮಸ್ಥರನ್ನು ಒಳಗೊಂಡ ಸಮಿತಿ ರಚನೆ ಮಾಡಬೇಕು. ಈ ದೇವಸ್ಥಾನವು ಗ್ರಾಮಸ್ಥರಿಗೆ ಒಳಪಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಚೆಕ್ಕೇರ ಮುತ್ತಣ್ಣ ಅವರು ಇಲ್ಲಿ ಕಟ್ಟಿಸಿರುವ ಗುಡಿಯೆ ಸಾಕ್ಷಿಯಾಗಿದೆ. ಈ ದೇವಿಯನ್ನು ಕರೆತಂದು ನೆಲೆ ನಿಲ್ಲಿಸಿ ಪೂಜಿಸಿದವರು ಇಲ್ಲಿಯ ಬೆಟ್ಟಕುರುಬ ಇದಕ್ಕೆ ಸಾಕ್ಷಿಯಾಗಿ ಜನಾಂಗದ ಹಿರಿಯರಿಗೆ ಸ್ಥಾನಕೊಟ್ಟು ಉತ್ಸವದಂದು ಆ ಸ್ಥಳದಲ್ಲಿ ಉತ್ಸವ ಮೂರ್ತಿ ಅವರೊಂದಿಗೆ ನರ್ತಿಸುವುದು ಇಂದಿಗೂ ನಡೆದುಕೊಂಡು ಬಂದಿದೆ. ಈ ಜನಾಂಗದವರಿಗೂ ಸಮಿತಿಯಲ್ಲಿ ಸ್ಥಾನಮಾನ ಕಲ್ಪಿಸಬೇಕೆಂದು ಅಭಿಪ್ರಾಯ ವ್ಯಕ್ತವಾಯಿತು.
ಉತ್ಸª Àಮೂರ್ತಿಯನ್ನು ಪೂರ್ವಿಕರ ಕಾಲದಿಂದಲೂ ದೇವಸ್ಥಾನದಿಂದ ಆನೆ ಮೇಲೆ ಹೊತ್ತು ಗದ್ದೆ ಮಾರ್ಗವಾಗಿ ತಂದು ಲಕ್ಷಣತೀರ್ಥ ನದಿಯಲ್ಲಿ ಸ್ಥಾನ ಮಾಡಿಸಿ ದಡದಲ್ಲಿರುವ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಈ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಿದ್ದರು. ಮರಳಿ ಹೋಗುವ ದಾರಿಯಲ್ಲಿ ಎಲ್ಲಾ ಕುಟುಂಬಸ್ಥರು ಆರತಿ ಬೆಳಗಿ ಹಣ್ಣು ಕಾಯಿ ಮಾಡಿಸುತ್ತಿದರು. ದಾರಿ ಮಧ್ಯೆ ಹೊಟ್ಟೇಂಗಡ ಕುಟುಂಬಸ್ಥರು ಚಪ್ಪರ ಹಾಕಿ ಮಂಟಪ ಹಾಕಿ ೧೦೧ ತೆಂಗಿನಕಾಯಿ ಈಡ್‌ಕಾಯಿ ಹಾಕಿ ವರ್ಷಂಪ್ರತಿ ಪೂಜೆ ಮಾಡುತ್ತಿದ್ದರು. ಆದರೆ ಇವೆಲ್ಲ ಆಚರಣೆಯನ್ನು ಈಗ ಸ್ಥಗಿತಗೊಳಿಸಿ ಇಷ್ಟ ಬಂದAತೆ ದೇವಸ್ಥಾನವನ್ನು ನಡೆಸುತ್ತಿದ್ದಾರೆ ಎಂದು ಅಸಮಾಧಾನ ಕೇಳಿಬಂತು.
ಹಿAದಿನಿAದ ಉತ್ಸವದಲ್ಲಿ ಬೊಳ್ಳಾಟ ನಡೆಯುವುದು ವಾಡಿಕೆ ಇದೆ. ವರ್ಷಂಪ್ರತಿ ಯಾರ ಅರಿವಿಗೆ ಬಾರದೆ ದರದಲ್ಲಿ ಇಷ್ಟ ಬಂದAತೆ ಹೆಚ್ಚು ಮಾಡಿದ್ದು, ಕಂಡುಬAದಿದೆ. ಆದ್ದರಿಂದ ಮುಂದೆ ಸಮಿತಿಯ ಅವಗಾಹನೆಗೆ ತಂದು ದರ ನಿಗದಿ ಮಾಡಬೇಕು. ಕರಿಂಗಾಳಿ ದೇವಿಯ ತಂಗಿ ಪನ್ಯತಮ್ಯೆಯ ದೇವಸ್ಥಾನದಲ್ಲಿ ನಡೆಯುವ ಸಮೂಹಿಕ ಬೊಳ್ಳಾಟದಂತೆ ಇಲ್ಲಿಯೂ ಕ್ರಮ ಬದ್ಧವಾಗಿ ಧಾರ್ಮಿಕ ಆಚರಣೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕುಟ್ಟ ಗ್ರಾ.ಪಂ. ಅಧ್ಯಕ್ಷ ಪ್ರತೀಶ್ ಗಣಪತಿ, ಕುಟ್ಟ ಪ್ರಾ.ಕೃ.ಪ.ಸ. ಸಂಘದ ಮಚ್ಚಮಾಡ ಸುಬ್ರಮಣಿ, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಕುಟ್ಟ ವರ್ತಕರ ಸಂಘದ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ, ಭಕ್ತಾದಿಗಳಾದ ಮಾಣೀರ ವಿಜಯ್ ನಂಜಪ್ಪ, ಚೆಟ್ಟಂಗಡ ಹ್ಯಾರಿ, ಕುಟ್ಟ ರೈತ ಸಂಘದ ಮುSಂಡ ಹೊಟ್ಟೆಂಗಡ ತಿಮ್ಮಯ್ಯ, ದೇವಸ್ಥಾನ ಮೇಲುಸ್ತುವಾರಿ ಕುಟುಂಬದ ಧ್ಯಾನ್, ಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ದುಗ್ಗಂಡ ರವಿ, ಮಚ್ಚಮಾಡ ಕಾಶಿ, ಅಜ್ಜಿಕುಟ್ಟೀರ ಬೋಪಣ್ಣ, ಕಾಳಮಾಡ ಬೋಸು, ಕಾಕೇರ ಸುರೇಶ್, ದಿನೇಶ್, ಕಾಯಿಮಾನಿ ಭದ್ರಕಾಳಿ ದೇವಸ್ಥಾನ ಪಾರುಪತ್ತೆದಾರ ಕೈಪಲೇರ ರವಿ, ವಕ್ಕಲಿಗರ ಪ್ರಭು, ಕುಮಾರ್, ರವಿ ಕುಮಾರ್, ಹಿಂದು ಮಳಯಾಳಿ ಸಂಘದ ಅಧ್ಯಕ್ಷ ರವಿ, ಎಸ್.ಎನ್.ಡಿ.ಪಿ. ಅಧ್ಯಕ್ಷ ಪ್ರಶಾಂತ್, ತಮಿಳು ಸಂಘದ ಅಧ್ಯಕ್ಷ ಇರ್‌ಳಾಂಡಿ, ಸೇರಿದಂತೆ ಗ್ರಾಮಸ್ಥರು ಭಕ್ತಾದಿಗಳು ಪಾಲುಗೊಂಡಿದ್ದರು.