ವಿರಾಜಪೇಟೆ, ಜ. ೦೪: ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ವೀರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕದನೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮಡಿಕೇರಿ ಮುಖ್ಯ ರಸ್ತೆ ಕದನೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಕಾಣತಂಡ ರವಿ ಅವರ ಮನೆ ಮುಂಭಾಗದ ತಿರುವಿನಲ್ಲಿ ವೀರಾಜಪೇಟೆ ನಗರದಿಂದ ಎಮ್ಮೆಮಾಡು ಕಡೆಗೆ ಸಾಗುತ್ತಿದ್ದ ಕಾರು (ಕೆಎ-೧೨ಎಂ.ಎ- ೭೮೬೪) ಮತ್ತು ಪಾರಾಣೆ ಗ್ರಾಮದಿಂದ ವೀರಾಜಪೇಟೆ ನಗರದತ್ತ ಆಗಮಿಸುತ್ತಿದ್ದ ಮಾರುತಿ ಸೆಲೆರಿಯೊ ಕಾರು (ಕೆಎ-೧೨ಎಂ.ಎ.-೯೬೧೯) ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮಾರುತಿ ಸೆಲೆರಿಯೋ ಚಾಲಕ ಪಾರಾಣೆ ಗ್ರಾಮದ ನಿವಾಸಿ ಮಂದತAಡ ತಿಲಕ್ ಎಂಬವರಿಗೆ ಗಾಯಗಳಾಗಿವೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳು ತಿಲಕ್ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಟಾಟಾ ಅಲ್ಟೊçÃಸ್ ಕಾರು ಚಾಲಕ ಎಮ್ಮೆಮಾಡು ಗ್ರಾಮದ ಹ್ಯಾರಿಸ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
-ಕಿಶೋರ್ ಕುಮಾರ್ ಶೆಟ್ಟಿ